ತಾಯಿಯೊಬ್ಬಳು ತಾನು ಹೆತ್ತ ಮೂರು ವರ್ಷದ ಮಗುವನ್ನು ವೇಲ್ ನಿಂದ ಬಿಗಿದು ಕೊಂದ ಘಟನೆಯೊಂದು ಬೆಳಕಿಗೆ…‌!

ಬೆಂಗಳೂರು : ತಾಯಿಯೊಬ್ಬಳು ತಾನು ಹೆತ್ತ ಮೂರು ವರ್ಷದ ಮಗುವನ್ನು ವೇಲ್ ನಿಂದ ಬಿಗಿದು ಕೊಂದ ಘಟನೆಯೊಂದು ಬೆಳಕಿಗೆ ಬಂದಿದೆ. ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಈ ಘಟನೆ ನಡೆದಿದೆ.
ರಮ್ಯಾ (35) ಎಂಬಾಕೆ ತನ್ನ ಮಗು ಪ್ರೀತಿಕಾಳನ್ನು ಕೊಂದಿದ್ದಾಳೆ. ಆಕೆಯನ್ನು ಸುಬ್ರಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಮ್ಯಾ ತನ್ನ ಮಗುವನ್ನು ಮಾನಸಿಕ ಅಸ್ವಸ್ಥೆ ಎಂಬ ಕಾರಣಕ್ಕೆ ಉಸಿರುಟ್ಟಿಸಿ ಕೊಲೆ ಮಾಡಿದ್ದಾಳೆ. ಕೊಲೆಯಾದ ಮಗು ಪ್ರೀತಿಕಾಳಿಗೆ ಮೂರು ವರ್ಷ ಹತ್ತು ತಿಂಗಳ ಕೂಡಿತ್ತು. ಆದರೆ ತಾಯಿ ಆಕೆಯನ್ನು ವೇಲ್ ನಿಂದ ಬಿಗಿದು ಕೊಂದಿದ್ದಾಳೆ.
ಇನ್ನು ಬಂಧಿತೆ ರಮ್ಯ ಗೃಹಿಣಿಯಾಗಿದ್ದು, ಈಕೆಯ ಪತಿ ಸಾಫ್ಟ್ ವೇರ್ ಇಂಜಿನಿಯರ್ಯಾಗಿದ್ದಾರೆ. ಪತಿ ನಾರ್ವೆಯಲ್ಲಿ ಕೆಲಸ ಮಾಡುತ್ತಿದ್ದು, ರಮ್ಯ ತನ್ನ ಅತ್ತೆ-ಮಾವನ ಜೊತೆಗೆ ವಾಜರಹಳ್ಳಿಯಲ್ಲಿ ವಾಸ ಮಾಡುವಿದ್ದಳು.
ರಮ್ಯಾ 11 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದಳು. ಆಕೆಗೆ ಮುದ್ದಾದ ಅವಳಿ ಹೆಣ್ಣು ಮಕ್ಕಳು ಜನಿಸಿತ್ತು. ಎರಡು ಮಗುವಿನ ಪೈಕಿ 3 ವರ್ಷ 10 ತಿಂಗಳ ಪ್ರೀತಿಕಾಳು ಮಾನಸಿಕ ಅಸ್ವಸ್ಥಳಾಗಿದ್ದಳು. ಮತ್ತೊಂದು ಮಗು ಸಡೃಢವಾಗಿದ್ದು, ಶಾಲೆಗೆ ಹೋಗುತಿತ್ತು.
ಇದರಿಂದ ನೊಂದ ರಮ್ಯಾ ಮಗುವನ್ನ ವೇಲಿನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವೇಳೆ ಅನುಮಾನ‌ಪಟ್ಟ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೊಲೆ ಮಾಡಿರುವುದಾಗಿ ರಮ್ಯಾ ಒಪ್ಪಿಕೊಂಡಿದ್ದಾಳೆ .
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Post

Leave a Reply

Your email address will not be published. Required fields are marked *