ಮಂಡ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಜಿಲ್ಲೆಯ ಇಂಡವಾಳು, ಬೇಲೂರು, ಹನಿಯಂಬಾಡಿ ಸೇರಿ ಹಲವೆಡೆ ಮಳೆಯಾಗಿದೆ. ಮಳೆಯಿಂದಾಗಿ ಕೃಷ್ಣರಾಜ ಸಾಗರದ ಅಣೆಕಟ್ಟಿಗೆ ನೀರಿನ ಹರಿವು ಹೆಚ್ಚಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ಕೆಆರ್ಡ್ಯಾಂಗೆ ಒಳಹರಿವು ಬರುತ್ತಿದೆ. ಇದರಿಂದ ರೈತರು ಸಂಸತಗೊಂಡಿದ್ದಾರೆ. ಕಾರಣ ಮಳೆ ನೀರನ್ನೇ ನಂಬಿಕೊಂಡು ಬಂದ ರೈತರಿಗೆ ಕೆಆರ್ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾದಂತೆ ಖುಷಿ ದುಪ್ಪಟ್ಟಾಗಿದೆ.