ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮನೆಯಿಂದ ಅಪೋಲೋ ಫಾರ್ಮಸಿಗೆ ಹೊರಟಿದ್ದ ರೇಣುಕಾಸ್ವಾಮಿಯನ್ನ ಬಾಲಾಜಿ ಬಾರ್ ಬಳಿ ಆಟೋದಲ್ಲಿ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ.
ಕಿಡ್ನಾಪ್ ಮಾಡಿ ಕುಂಚಿಗನಾಳ್ ಪೆಟ್ರೋಲ್ ಬಂಕ್ ಬಳಿ ಕರೆದೊಯ್ದ ಆರೋಪಿಗಳು ರವಿ ಎಂಬಾತನ ಕಾರಿನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಕಾರು ಚಾಲಕ ರವಿಗೆ ಬಾಡಿಗೆ ಇದೆ ಎಂದು ರಾಘವೇಂದ್ರ ಕರೆಸಿಕೊಂಡಿದ್ದ.
ಚಾಲಕ ತುಮಕೂರು ಟೋಲ್ ಬಳಿ ಎಲ್ಲರೂ ಊಟ ಮಾಡಿದ್ರು. ಈ ವೇಳೆ ರೇಣುಕಾಸ್ವಾಮಿಯೇ ಊಟದ ಬಿಲ್ ಕೂಡ ಮಾಡಿದೆ ಅನ್ನೋ ಮಾಹಿತಿ ಇದೆ. ನಂತರ ನೈಸ್ ರಸ್ತೆ ಮೂಲಕ ನೇರವಾಗಿ ಪಟ್ಟಣಗೆರೆ ಶೆಡ್ಗೆ ಆಗಮಿಸಿದ್ದಾರೆ. ಶೆಡ್ ಒಳಗೆ ರೇಣುಕಾ ಒಳಗೆ ಪಡೆಸಿದ್ರೆ ಬೇಳು ಒಳಗೆ ಹೋಗಿಲ್ಲ. ಎಲ್ಲರೂ ಕಾರಿನಲ್ಲೇ ಇದ್ದಾರೆ ಅನ್ನೋ ಮಾಹಿತಿ ಇದೆ.