ಚಿತ್ರದುರ್ಗ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 13 ಮಂದಿ ಬಂಧನವಾಗಿದ್ದಾರೆ. ಇದೀಗ ಪ್ರಕರಣದಲ್ಲಿ ಬಂಧಿಸಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಚಿತ್ರದುರ್ಗದ ಡಿವೈಸಿಪಿ ಕಚೇರಿಗೆ ತಾವಾಗಿಯೇ ಬಂದು ಜಗ್ಗು ಹಾಗೂ ಅನು ಅಲಿಯಾಸ್ ಅನುಕುಮಾರ್ ಎಂಬುವವರು ಪೊಲೀಸರಿಗೆ ಶರಣಾಗಿದ್ದಾರೆ. ಈ ಇಬ್ಬರು ಆಟೋ ಚಾಲಕರು ಸೇರಿದ್ದಾರೆ. ಕೊಲೆ ಪ್ರಕರಣದಲ್ಲಿ ಒಟ್ಟು 17 ಮಂದಿ ಆರೋಪಿಗಳಲ್ಲಿ 16 ಮಂದಿ ಬಂಧನವಾಗಿದೆ. ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆತಂದವರಲ್ಲಿ ರಾಜು ಎಂಬಾತನ ಸುಳಿವು ಇನ್ನೂ ಸಿಕ್ಕಿಲ್ಲ.
ಮತ್ತಿಬ್ಬರ ಬಂಧನ : ಅನು ಅಲಿಯಾಸ್ ಅನಿಲ್ ಕುಮಾರ್ ಎಂಬಾತ ರೇಣುಕಾಸ್ವಾಮಿಯನ್ನ ದರ್ಶನ್ ಅಭಿಮಾನಿಗಳ ಅಧ್ಯಕ್ಷ ರಾಘವೇಂದ್ರ ಹೇಳಿದರು. ರೇಣುಕಾಸ್ವಾಮಿಯ ಸ್ಕೂಟರ್ಅನ್ನ ಬಾಲಾಜಿ ಬಳಿ ಬಾರ್ ನಿಲ್ಲಿಸಿ, ದರ್ಶನ್ ಭೇಟಿ ಮಾಡೋಣ ಎಂದು ಆತನನ್ನು ಆಟೋದಲ್ಲಿ ಕರೆದುಕೊಂಡು ಬಂದಿದ್ದರು. ನಂತರ ಜಗ್ಗ ರವಿ ಎಂಬಾತನ ಇಟಿಯೋಸ್ ಕಾರ್ ಅನ್ನು ಬಾಡಿಗೆಗೆ ಬೆಂಗಳೂರಿಗೆ ಕರೆದೊಯ್ದಿದ್ದರು. ಇದೀಗ ಇಬ್ಬರನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ.
ನಿನ್ನೆ ರವಿಕುಮಾರ್ ಪೊಲೀಸರಿಗೆ ಶರಣು : ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದ ಬರಲು ರಾಘವೇಂದ್ರ, ಜಗ್ಗು, ಅನಿಲ್ ಕುಮಾರ್ ಹಾಗೂ ರಾಜು ಎಂಬಾರ ರವಿಯ ಕಾರನ್ನು ಬಾಡಿಗೆಗೆ ಬುಕ್ ಮಾಡಿದ್ದಾರೆ. ಬೆಂಗಳೂರಿಗೆ 4000 ಸಾವಿರ ರೂಪಾಯಿ ಬಾಡಿಗೆ ಪಡೆದಿದ್ದರು.
ಚಿತ್ರದುರ್ಗದ ಕುಂಚಿಗನಾಳ್ ಸಮೀಪದ ಜಗಳೂರು ಮಹಾಲಿಂಗಪ್ಪ ಪೆಟ್ರೋಲ್ ಬಂಕ್ ಬಳಿ, ರೇಣುಕಾ ಸ್ವಾಮಿಯನ್ನು ಕಾರಿನಲ್ಲಿ ಪಿಕ್‌ಅಪ್ ಮಾಡಲಾಗಿದೆ. ತುಮಕೂರು ಬಳಿ ಎಲ್ಲರೂ ಊಟ ಮಾಡಿದ್ದಾರೆ. ಅದಕ್ಕೆ ರೇಣುಕಾ ಸ್ವಾಮಿಯ ದುಡ್ಡು ನೀಡಿದ್ದರು ಎಂದು ತಿಳಿಸಿದರು. ಅಲ್ಲಿಂದ ಸೀದಾ ಕೆಂಗೇರಿಗೆ ಕಾರು ಬಂದಿದ್ದು, ನಂತರ ಪಟ್ಟಣಕ್ಕೆ ಶೆಡ್‌ಗೆ ಲೋಕೇಶನ್ ಕಳುಹಿಸಿಕೊಂಡು, ಅಲ್ಲಿ ಡ್ರಾಫ್ ಮಾಡಿಸಿಕೊಂಡಿದ್ದರು ಎಂದು ರವಿ ತಿಳಿಸಿದ್ದಾನೆ.
ಕಾರು ಶೆಡ್‌ಗೆ ಹೋಗುತ್ತಿದ್ದಂತೆಯೇ, ಅಲ್ಲಿ ಹಲವು ಮಂದಿ ಇದ್ದಾರೆ. ರಾಘವೇಂದ್ರ ರೇಣುಕಾಸ್ವಾಮಿಯನ್ನು ಇಳಿಸಿಕೊಂಡ ಶೆಡ್ಗೆ ಕರೆದುಕೊಂಡು ಹೋಗಿದ್ದಾನೆ. ರವಿಗೆ ಕಾರಿನಲ್ಲೇ ಇರುವಂತೆ ಹೇಳಿದ್ದಕ್ಕೆ, ರವಿ ಕಾರಿನಲ್ಲೇ ಮಲಗಿದ್ದಾನೆ.
ರೇಣುಕಾಸ್ವಾಮಿ ಕೊಲೆಯಾಗಿರುವ ವಿಚಾರ ತಿಳಿಯದಿದ್ದರೆ ಚಾಲಕ ರವಿ ಆತಂಕಕ್ಕೊಳಗಾಗಿ, ಬಾಡಿಗೆ ಹಣ ಕೊಟ್ಟರೆ ತಾನೂ ವಾಪಸ್ ಹೋಗುತ್ತೇನೆ, ಇದೆಲ್ಲಾ ನನಗ್ಯಾಕೆ ಎಂದು ರಘುನಿಂದ 4 ಸಾವಿರ ರೂ. ಹಣ ಪಡೆದರು. ಜಗ್ಗು, ಅನು , ರಾಜು ಜೊತೆಗೆ ರವಿ ಜೂನ್ 9 ರ ಬೆಳಗಿನ ಜಾವ 4 ಗಂಟೆಗೆ ಚಿತ್ರದುರ್ಗಕ್ಕೆ ಮರಳಿದ್ದಾಗಿ ಉತ್ಪನ್ನ ಟ್ಯಾಕ್ಸಿ ಚಾಲಕರ ಸಂಘಕ್ಕೆ ತಿಳಿಸಿದ್ದಾನೆ. ನಂಥರ ಚಾಲಕರ ಸಂಘದವರು ಆತನನ್ನು ಕರೆದುಕೊಂಡು ಬಂದು ಚಿತ್ರದುರ್ಗ ಪೊಲೀಸರಿಗೆ ಶರಣಾಗತಿ ಮಾಡಿದ್ದಾರೆ.