ಬೆಳಗಾವಿ : ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಅವರ ಮೇಲಿನ ಸುತ್ತೋಲೆಗಳನ್ನು ಹೊರಡಿಸಿ ಹೊಸ ಹೊಸ ದಾಖಲೆಗಳನ್ನು ಕೇಳುತ್ತಾ ಕಾರ್ಮಿಕರಿಗೆ ತೊಂದರೆ ನೀಡುತ್ತಿಲ್ಲ ಕಾರ್ಮಿಕರ ಕಾಯ್ದೆ 1996 ರ ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸುವಂತೆ ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶ್ರೀ ಎನ್. ಆರ್. ಲಾತೂರ್ ವಕೀಲರು ಮಾತನಾಡಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಅವಿದ್ಯಾವಂತರು ಹಾಗೂ ಕಾರ್ಮಿಕರಾಗಿರುತ್ತಾರೆ. ಅಸಂಘಟಿತ
ಆದರೆ ನೋಂದಣಿ, ನವೀಕರಣ ಮತ್ತು ಎಲ್ಲ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ಕಟ್ಟಡ ಕಟ್ಟಲು ಪಂಚಾಯಿತಿ /ಪುರಸಭೆ/ ನಗರಸಭೆ /ಮಹಾನಗರ ಪಾಲಿಕೆ/ ಸ್ಥಳೀಯ ಸಂಸ್ಥೆಗಳಿಂದ ಪಡೆದ ಪರವಾನಗಿ ಪ್ರಮಾಣ ಪತ್ರ ಹಾಗೂ ವೇತನ ಪ್ರತಿಗಳನ್ನು ಸಲ್ಲಿಸಬೇಕು
ಅಂತ ಶರತ್ತುಗಳನ್ನು ವಿಧಿಸಿರುವ ಆದೇಶ/ಸುತ್ತೋಲೆ/ಅನುಸೂಚನೆಗಳು ಕಲಂ 12ರ ವಿರುದ್ಧ ಮತ್ತು ವೇತನ ಪಾವತಿ ಕುರಿತು ಕಟ್ಟಡ ಕಾರ್ಮಿಕ ಮಂಡಳಿಯು ರದ್ದುಗೊಳಿಸಿದೆ ಕೆಲವು ದಿನಗಳ ಹಿಂದೆ ಆದೇಶ ಮತ್ತು ಮೇಲಿಂದ ಮೇಲೆ ನಿಯಮಾವಳಿಗಳನ್ನು ಬದಲಿಸಿ ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಕಟ್ಟಡ ಕಲ್ಯಾಣ ಮಂಡಳಿಯ ಅಧಿಕಾರಿಗಳಿಂದ ನಡೆಯುತ್ತಿದೆ.
ಆದ್ದರಿಂದ ಕಟ್ಟಡ ಪರವಾನಿಗೆ ಪತ್ರವನ್ನು ಸಲ್ಲಿಸಿ ಹಾಗೂ ವೇತನ ಪ್ರತಿಗಳನ್ನು ಸಲ್ಲಿಸಲು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಸಂಬಂಧಿಸಿದ ಅಧಿಕಾರಿಗಳನ್ನು ಒಂದು ವಾರದಲ್ಲಿ ಅಮಾನತುಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಎನ್ ಆರ್ ಲಾತೂರ್, ವಕೀಲರಾದ ನಿಂಗಪ್ಪ ಮಾಸ್ತಿ ಮತ್ತು ವಿನೋದ ಪಾಟೀಲ ಹಾಗೂ ಇತರ ಕಟ್ಟಡ ಕಾರ್ಮಿಕರು.