ಚಿತ್ರದುರ್ಗ ಜೂ. 16 : ಚಿತ್ರನಟ ದರ್ಶನ್ ಸಹಚರರಿಂದ ಕೊಲೆಗೀಡಾಗಿರುವ ರೇಣುಕಾ ಸ್ವಾಮಿ ಅವರ ನಿವಾಸಕ್ಕೆ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಜೊತೆಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
ಮಗನ ಅಗಲಿಕೆಯ ದುಃಖದಲ್ಲಿರುವ ತಂದೆ ತಾಯಿಗಳನ್ನು ಭೇಟಿ ಮಾಡಿ, ಈ ಘಟನೆಯಿಂದ ಎಲ್ಲರಿಗೂ ನೋವಾಗಿದೆ, ಕರುಳ ಕುಡಿ ಕಳೆದುಕೊಂಡ ದುಃಖ ಕಳೆದುಕೊಂಡವರಿಗೆ ಮಾತ್ರ ಗೊತ್ತಾಗುತ್ತದೆ, ಮೃತ ಕುಟುಂಬಕ್ಕೆ ನ್ಯಾಯ ಒದಗಿಸಲು ನಾನು ಸಹ ಬದ್ದ, ಈ ನಿಟ್ಟಿನಲ್ಲಿ ಕುಟುಂಬದ ಧ್ವನಿಯಾಗುವೆ, ಸರ್ಕಾರ ಸಹ ನೊಂದ ಕುಟುಂಬಕ್ಕೆ ನೆರವಾಗಬೇಕು, ಅಭಯ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಶಶಿಧರ, ಹಾಗೂ ಮಾಜಿ ನಗರಾಭಿವೃದ್ಧಿ ಅಧ್ಯಕ್ಷರಾದ ಬದ್ರಿನಾಥ ಜೊತೆಗಿದ್ದರು.