ಪಕ್ಷದ ಕಾರ್ಯಕರ್ತರು, ಮುಖಂಡರು, ಮತದಾರರು ಕೈ ಹಿಡಿದಿರುವುದರಿಂದ ನನ್ನ ಗೆಲುವು ಕಂಡಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ನೂತನ ಸದಸ್ಯರಾದ ಡಿ.ಟಿ.ಶ್ರೀನಿವಾಸ್….!

ಚಿತ್ರದುರ್ಗ, ಜೂ. 17 : ಸ್ವಾತಂತ್ರ ಬಂದಾಗಿನಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಂಡಿಲ್ಲ, ಈಗ ಪಕ್ಷದ ಕಾರ್ಯಕರ್ತರು, ಮತದಾರರು ಕೈ ಹಿಡಿದಿದ್ದಾರೆ ನನ್ನ ಗೆಲುವು ಕಂಡಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ನೂತನ ಸದಸ್ಯರಾದ ಡಿ.ಟಿ.ಶ್ರೀನಿವಾಸ್ ಅವರು ಪ್ರಕಟಿಸಿದರು. 

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಗೆ ನೂತನ ಸದಸ್ಯರಾದ ಡಿ.ಟಿ.ಶ್ರೀನಿವಾಸ್ ಅವರು ನೀಡಿದ ಸಂದರ್ಭದಲ್ಲಿ ಪಕ್ಷದ ವತಿಯಿಂದ, ಅಭಿಮಾನಿಗಳು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು, ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ತಿನ ಚುನಾವಣೆಯನ್ನು ಅಷ್ಟಾಗಿ ಪರಿಗಣಿಸದೆ, ನಮ್ಮ ಸರ್ಕಾರ ಮಾಡಿದ ಪರಿಷತ್ತಿನಲ್ಲಿ ಪಾಸಾಗಬೇಕು.

ಆದರೆ ಈಗ ಪರಿಷತ್‌ನಲ್ಲಿ ನಮ್ಮ ಪಕ್ಷದ ಬಲ ಕಡಿಮೆಯಾಗಿದೆ ಈ ಚುನಾವಣೆಯಿಂದ ಪರಿಷತ್‌ನಲ್ಲಿ ನಮ್ಮ ಬಲವನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದರೆ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. 

1952 ರಿಂದ ಇಲ್ಲಿಯವರೆಗೂ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷವು ಗೆದ್ದಿಲ್ಲ, ನಾನು ಈ ಚುನಾವಣೆಯಲ್ಲಿ ನಿಂತಾಗ ವಿರೋಧಿಗಳು ನನ್ನ ಬಗ್ಗೆ ಅಪಪ್ರಚಾರವನ್ನು ಮಾಡುವುದರ ಮೂಲಕ ನನ್ನನ್ನು ಸೋಲಿಸಲು ಮುಂದಾಗಿದ್ದರು, ಜಾತಿವಾದಿ, ಅಹಿಂದ ಎಂದು ಮತದಾರರಲ್ಲಿ ಗೊಂದಲ ಮೂಡಿಸುವ ಮೂಲಕ ಮತಗಳನ್ನು ಸೆಳೆಯುವ ಕಾರ್ಯವನ್ನು ಮಾಡಿದರು. ಆದರೆ ಮತದಾರರು ಅದಕ್ಕೆ ಮ್ನನಣೆಯನ್ನು ನೀಡದೆ ನನ್ನ ಗೆಲುವಿಗೆ ಸಹಕಾರ ನೀಡಿದ್ದಾರೆ.

ಕಾಂಗ್ರೆಸ್ ಸಾಮಾಜಿಕ ಪಕ್ಷ ನ್ಯಾಯವನ್ನು ನೀಡುವ ಪಕ್ಷವಾಗಿದೆ. ಸಣ್ಣ ಸಣ್ಣ ಸಮುದಾಯವನ್ನು ಗುರುತಿಸುವುದರ ಮೂಲಕ ರಾಜಕೀಯ ಸ್ಥಾನವನ್ನು ನೀಡಿದೆ. ಇಲ್ಲಿ ನನ್ನ ಮತ್ತು ನನ್ನ ಹೆಂಡತಿ ಮಧ್ಯೆ ತಂದಿಟ್ಟು ನಮ್ಮನ್ನು ಬೇರೆ ಮಾಡುವುದಕ್ಕೆ ನೋಡಿದರು. ನನಗೆ ಹುಳಿಯನ್ನು ಹಿಂಡಿ ಅಭ್ಯಾಸ ಇಲ್ಲ ಏನೇ ಆದರೂ ಈ ಕ್ಷೇತ್ರವನ್ನು ಗೆಲ್ಲಬೇಕಾದ ಅನಿವಾರ್ಯತೆ ಇತ್ತು ಈ ಹಿನ್ನಲೆಯಲ್ಲಿ ಎಲ್ಲರ ಸಹಕಾರ, ಅದರ ಸಹಾಯದಿಂದ ಗೆಲುವನ್ನು ಸಾಧಿಸಲಾಗಿದೆ ಎಂದು ಶ್ರೀನಿವಾಸ್ ಅವರು ಹೇಳಿದರು.

ಶಿಕ್ಷಕರ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಕರ ಸಮಸ್ಯೆ ಏನೇ ಇದ್ದರೂ ಸಹ ಅದನ್ನು ಪರಿಹರಿಸುವ ಕಾರ್ಯವನ್ನು ಮಾಡಲಾಗುವುದಿಲ್ಲ. ನನ್ನ ಜೊತೆಯಲ್ಲಿ ಪೂರ್ಣಿಮಾ, ಹಾಗೂ ಕೆಡಿಪಿ ಸದಸ್ಯರಾದ ನಾಗರಾಜ್ ರವರು ಜೊತೆಯಲ್ಲಿದ್ದಾರೆ. ಅವರ ಶಿಕ್ಷಕರ ಸಹಾಯದಿಂದ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವನ್ನು ಮಾಡಲಾಗುವುದು. ಶಿಕ್ಷಕರ ಸಮಸ್ಯೆ ಪರಿಹಾರದಲ್ಲಿ ಪ್ರಮಾಣಿಕ ಪ್ರಯತ್ನವನ್ನು ಮಾಡಲಾಗುವುದಿಲ್ಲ. ಶಿಕ್ಷಕರಿಗೆ ಧನ್ಯವಾದ ತರುವಂತ ಯಾವುದೇ ಕೆಲಸವನ್ನು ಎಂದು ಶ್ರೀನಿವಾಸ್ ಭರವಸೆಯನ್ನು ನೀಡಿದ್ದಾರೆ.

‘ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಗೆಲುವು ಕುತಂತ್ರ, ಕುತಂತ್ರದಿಂದ ಬಂದಿಲ್ಲ. ಸಂಘಟನೆ, ನೀತಿ-ನಿಯಮ, ಬಹುದಿನದ ಹೋರಾಟ, ಶಿಕ್ಷಕರ ಸಮಸ್ಯೆಗಳಿಗೆ ಉತ್ತರ ಸಿಗುವ ಹಿಂದೆ ಕೊಟ್ಟಂತಹ ಗೆಲುವು. ಈ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದರು.

ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗದಲ್ಲಿ ಕಳೆದ 30 ವರ್ಷದಿಂದ ಶಾಸಕರಿರಲಿಲ್ಲ, ಇದೇ ರೀತಿ ಕಳೆದ 18 ವರ್ಷದಿಂದ ವಿಧಾನ ಪರಿಷತ್ ಸದಸ್ಯರು ಇರಲಿಲ್ಲ ಈಗ ಮತದಾರರ ಸಹಕಾರ, ವಿಧಾನ ಸಭೆಯಲ್ಲಿ ನಾನು ಈ ರೀತಿ ಶ್ರೀನಿವಾಸ್ ವಿಧಾನ ಪರಿಷತ್ ಸದಸ್ಯರಾದರು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು.

2029 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ತರುವುದರ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕಾಗಿದೆ ಇನ್ನೂ ಹಲವಾರು ಕಾರ್ಯಗಳ ಚುನಾವಣೆಯಾದ ತಾ.ಪಂ. ಹಾಗೂ ಜಿ.ಪಂ, ಚುನಾವಣೆಯನ್ನು ಸಹ ಎಲ್ಲರ ಸಹಕಾರದಿಂದ ಗೆಲ್ಲುವುದರ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಕರೆ ನೀಡಿದರು.

ಮಾಜಿ ಶಾಸಕಿ ಕೆ.ಪೂರ್ಣಿಮಾ ಮಾತನಾಡಿ, ‘ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು. ಕ್ಷೇತ್ರದಲ್ಲಿ ಈ ಹಿಂದೆ ಡಿ.ಸುಧಾಕರ್ ಹಾಗೂ ನಾನು ವೈರಿಗಳಾಗಿರದೆ ಪ್ರತಿಸ್ಪರ್ಧಿ- ಆಗಿದ್ದೆವು. ಈಗ ಒಂದೇ ಪಕ್ಷದ ಅಡಿಯಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಲಾಗುತ್ತದೆ’ ಎಂದು ಹೇಳಿದರು.

ಡಿಸಿಸಿ ಜಿಲ್ಲಾಧ್ಯಕ್ಷರಾದ ಎಂ.ಕೆ.ತಾಜ್‌ಪೀರ್ ಮಾತನಾಡಿ, ಇಂದು ಸಂಭ್ರಮದ ದಿನವಾಗಿದೆ, ಕಳೆದ ತಿಂಗಳ ಹಿಂದೆ ವಿಧಾನಸಭೆಗೆ ನಮ್ಮ ಪಕ್ಷದ ಮತದಾರರು ಆಯ್ಕೆಯಾಗಿದ್ದಾರೆ ಈಗ ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನ ಅಭ್ಯರ್ಥಿ ಕೈಹಿಡಿಯುವ ಮೂಲಕ ಪರಿಷತ್‌ನಲ್ಲಿ ನಮ್ಮ ಪಕ್ಷದ ಸಂಖ್ಯಾಬಲವನ್ನು ಹೆಚ್ಚಿಸಿದ್ದಾರೆ.

ಉಪನ್ಯಾಸಕರು ತಮ್ಮ ಬೇಡಿಕೆಗಾಗಿ ಪ್ರತಿಭಟನೆಯನ್ನು ನಡೆಸುತ್ತಿರುವಾಗ ಅಂದಿನ ಬಿಜೆಪಿ ಸರ್ಕಾರ ಸ್ಪಂದನೆ ನೀಡಿಲ್ಲ, ಈ ಸಮಯದಲ್ಲಿ ನಮ್ಮ ರಾಜ್ಯಾಧ್ಯಕ್ಷರಾದ ಶಿವಕುಮಾರ್ ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಲಾಯಿತು. ಈಗ ಸರ್ಕಾರವು ಅವರ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿಗೌಡ, ಜಿ.ಪಂ.ಮಾಜಿ ಸದಸ್ಯ ರಘು, ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಶಿವಣ್ಣ, ಲಕ್ಷ್ಮೀಕಾಂತ, ವೆಂಕಟೇಶ್, ಜಿ.ಪಂ. ಮಾಜಿ ಅಧ್ಯಕ್ಷ ಬಾಲರಾಜ್, ನಗರಾಭಿವೃದ್ದಿ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ, ಮಧುಗೌಡ, ಪ್ರಕಾಶ್ ನಾಯ್ಕ್, ಹನೀಫ್, ಖುದ್ದುಸ್, ಪಾತಣ್ಣ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಮಂಜಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದಕ್ಕೂ ಮುನ್ನಾ ಶಾಸಕರಾದ ವಿರೇಂದ್ರ ಪಪ್ಪಿ, ವಿಧಾನ ಪರಿಷತ್ ನೂತನ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಡಿಸಿಸಿ ಅಧ್ಯಕ್ಷ ತಾಜ್‌ಪೀರ್, ಸಂವಿದಾನ ಶಿಲ್ಪ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಹಾರವನ್ನು ಹಾಕುವುದರ ಮೂಲಕ ನಮನ ಸಲ್ಲಿಸಿದರು.

Related Post

Leave a Reply

Your email address will not be published. Required fields are marked *