ಬೆಂಗಳೂರು : ಆನೇಕಲ್ ತಾಲ್ಲೂಕಿನ ಬಳ್ಳೂರಿನಲ್ಲಿ ಈಜಾಡಲು ಕೆರೆಗೆ ಹೋಗಿ ಮೃತಪಟ್ಟ ವಿದ್ಯಾರ್ಥಿ ಶವ ಇಂದು ಬೆಳಗ್ಗೆ ಬಳ್ಳೂರು ಕೆರೆಯಲ್ಲಿದೆ. ಹತ್ತನೇ ತರಗತಿ ವಿದ್ಯಾರ್ಥಿ ಧನುಷ್ (15) ಮೃತದೇಹಕ್ಕಾಗಿ ಭಾನುವಾರದಿಂದ ಅಗ್ನಿಶಾಮಕ ದಳದ ಸದಸ್ಯರು ಹುಡುಕಾಟ ನಡೆಸುತ್ತಿದ್ದರು.
ಧನುಷ್ ತಂದೆ ತಾಯಿ ಬೆಂಗಳೂರಿನಲ್ಲಿ ವಾಸವಿದ್ದಾರೆ, ಆತ ತಾತ ಹಾಗೂ ಮಾವನ ಜೊತೆ ಅತ್ತಿಬೆಲೆಯಲ್ಲಿ ವಾಸವಿದ್ದ. ಭಾನುವಾರ ಮಧ್ಯಾಹ್ನ ಕ್ರಿಕೆಟ್ ಆಡುವುದಾಗಿ ಮನೆಯಿಂದ ಧನುಷ್ ಹೊರಟಿದ್ದ. ಕ್ರಿಕೆಟ್ ನೋಡಲು ಹೋದವನು ಕೆರೆಯಲ್ಲಿ ಈಜಾಡಲು ತೆರಳಿದ್ದ. ಕೆರೆಯಲ್ಲಿ ನೀರು ತುಂಬಿದ ಈಜಾಡಲು ಬಾರದೇ ಮುಳುಗಿ ಧನುಷ್ ಸಾವನ್ನಪ್ಪಿದ್ದಾನೆ.
ಭಾನುವಾರ ಸಂಜೆ ಅತ್ತಿಬೆಲೆ ಪೊಲೀಸರು ಹಾಗೂ ಶಾಮಕ ದಳ ಸೇರಿ ಹುಡುಕಾಟ ನಡೆಸಿದ್ದರು. ಆದರೆ ಕತ್ತಲಾದ ಕಾರಣ ಹುಡುಕಾಟವನ್ನು ನಿಲ್ಲಿಸಲಾಗಿದೆ. ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತೆ ಹುಡುಕಾಟ ಪ್ರಾರಂಭವಾಗಿ ಮೃತ ದೇಹವಿದೆ.