ಬಾಲಿವುಡ್ ಬೆಡಗಿ ಸನ್ನಿ ಲಿಯೋನ್‌ಗೆ ಕರ್ನಾಟಕವೇನು ಹೊಸದಲ್ಲ. ಕನ್ನಡದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಸಿನಿಮಾ ಪ್ರಚಾರ ಕಾರ್ಯಕ್ಕೂ ಚಿತ್ರತಂಡಕ್ಕೆ ಸಾಥ್ ನೀಡಿದ್ದು ಇದೆ. ಆದರೆ ಈಗ ತಮಿಳು ಸಿನಿಮಾವೊಂದರ ಚಿತ್ರಕ್ಕಾಗಿ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಕಬ್ಬಳಿ ಗ್ರಾಮದಲ್ಲಿ ಸನ್ನಿಯೋನ್ ಕಾಣಿಸಿಕೊಂಡಿದ್ದಾರೆ.
ಕಬ್ಬಳಿ ಗ್ರಾಮಕ್ಕೆ ಆಗಮಿಸಿದ ಸನ್ನಿ, ಶಾಲೆಯಲ್ಲಿ ಶೂಟಿಂಗ್. ಬಳಿಕ ತರಗತಿಗೂ ಭೇಟಿ ನೀಡಿ ಮಕ್ಕಳ ನಟಿ ಕಾಲ ಕಳೆದಿದ್ದಾರೆ. ಇದೇ ವೇಳೆ, ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಪ್ಪು ಬಣ್ಣ ಟೀ ಶರ್ಟ್ ಮತ್ತು ಪ್ಯಾಂಟ್‌ಗೆ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾರೆ.
ಅಂದಹಾಗೆ, ‘ಕೊಟೇಶನ್’ ಚಿತ್ರದ ಚಿತ್ರೀಕರಣ ಕರ್ನಾಟಕದಲ್ಲಿ ನಡೆಯುತ್ತಿದೆ. ಈ ವೇಳೆ, ಸಾಕಷ್ಟು ಅಭಿಮಾನಿಗಳು ಸನ್ನಿ ಲಿಯೋನ್ ಅವರನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೊಟೇಶನ್ ಗ್ಯಾಂಗ್’ ಸಿನಿಮಾದಲ್ಲಿ ಸನ್ನಿ ಜೊತೆ ಜಾಕಿ ಶ್ರಾಫ್, ಪ್ರಿಯಾ ಮಣಿ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ.