Breaking
Thu. Dec 26th, 2024

ಸಮಾಜಕಲ್ಯಾಣ ಇಲಾಖೆ ಪಕ್ಕದ ಆದಿಕರ್ನಾಟಕ ಹಾಸ್ಟೆಲ್ ಹೆಸರಿನ ಜಾಗವನ್ನು ದುರುಪಯೋಗ ; ನೊಂದಣಿಯನ್ನು ರದ್ದು ಪಡಿಸುವಂತೆ ಜಿಲ್ಲಾಡಳಿತವನ್ನು ನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜನ್ ಒತ್ತಾಯ….!

ಚಿತ್ರದುರ್ಗ, ಜೂ. 17 : ನಗರದ ಬಿ.ಡಿ.ರಸ್ತೆಯ ಸಮಾಜಕಲ್ಯಾಣ ಇಲಾಖೆ ಪಕ್ಕದ ಆದಿಕರ್ನಾಟಕ ಹಾಸ್ಟೆಲ್ ಹೆಸರಿನ ಜಾಗವನ್ನು ದುರುಪಯೋಗ ಪಡಿಸಿಕೊಂಡ ಆನಧಿಕಾರದ ಜನಾಂಗದವರ ಗಮನಕ್ಕೆ ಬಾರದಂತೆ ನೊಂದಣಿಯನ್ನು ಮಾಡಿಸಿದ್ದು ಈ ಕೂಡಲೇ ನೊಂದಣಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ನಿವೃತ್ತಿ ತಹಶೀಲ್ದಾರ್ ಮಲ್ಲಿಕಾರ್ಜನ್ ಒತ್ತಾಯಿಸಿದ್ದಾರೆ. 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು 1956-57 ನೇ ಸಾಲಿನಲ್ಲಿ ಮೈಸೂರು ಎಲ್ಲಾ ಜನಾಂಗದವರಿಗೆ ಯಾವುದೇ ತಾರತಮ್ಯವಿಲ್ಲದಂತೆ ಜನಸಂಖ್ಯೆ ಮತ್ತು ಮೀಸಲು ಆಧಾರದ ಮೇಲೆ ಪ್ರತಿ ಜಾತಿಯವರ ಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆ-ಕಾಲೇಜು, ವಸತಿ ನಿಲಯ, ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಅಭಿವೃದ್ಧಿ ಹೊಂದುವ ದೃಷ್ಟಿಯಿಂದ ಮಂಜೂರು ಮಾಡಿದ್ದು, ಆ ಅವಧಿಯ ಚಿತ್ರದುರ್ಗ ಜಿಲ್ಲೆ ದಾವಣಗೆರೆ, ಹರಿಹರ, ಜಗಳೂರು ಜಿಲ್ಲೆ 9 ತಾಲ್ಲೂಕುಗಳಲ್ಲಿ ಸೇರಿದ್ದು, ಆ ಅವಧಿಯಲ್ಲಿ ದಾವಣಗೆರೆಯ ಆದ ಜಿ.ದುಗ್ಗಪ್ಪನವರು ಈ ಜನಾಂಗದ ಮುಖಂಡರಾದ ಚಿತ್ರದುರ್ಗ ನಗರದ ಮಧ್ಯಭಾಗದ ಬಿ.ಡಿ.ರಸ್ತೆಯಲ್ಲಿ ಸುಮಾರು 2 ಜಿಲ್ಲೆಗಳಿಗೆ ಸೇರಿದ ಪ್ರದೇಶವನ್ನು ಆದಿಕರ್ನಾಟಕ ಹಾಲ್ಜಿಗೆ ಮಂಜೂರು ಮಾಡಲಾಗಿದೆ.

ಆ ಜಾಗದಲ್ಲಿ ದಿವಂಗತ ಜಿ.ದುಗ್ಗಪ್ಪನವರ ಕುಟುಂಬಕ್ಕೆ ಸೇರಿದ ಕೆಲ ವ್ಯಕ್ತಿಗಳು ಈ ಜನಾಂಗದವರಿಗಾಗಿ ಯಾವುದೇ ವಾಣಿಜ್ಯ ಸಂಕೀರ್ಣ, ಸಮುದಾಯ ಭವನವನ್ನು ನಿರ್ಮಿಸಿದರೆ ತಮ್ಮ ಕುಟುಂಬದ ಸ್ವಾರ್ಥದ ಹಿತಕ್ಕಾಗಿ 1974-75 ನೇ ಸಾಲಿನಲ್ಲಿ ಈ ಜನಾಂಗಕ್ಕೆ ಸೇರಿದ ಆದಿ ಕರ್ನಾಟಕ ಹಾಸ್ಟೆಲ್ ಜಾಗದಲ್ಲಿ ಶ್ರೀ ಕಸ್ತೂರಿ ಬಾದ್ಯಾಭಿವೃದ್ಧಿ ಸಂಸ್ಥೆಯು ಕೆಲವು ವರ್ಷಗಳ ಕಾಲ ಕಾಲಾಸ್ಟೇಲ್‌ನ ಸರ್ಕಾರದಿಂದ ಹಲವಾರು ರೂ. ಕಟ್ಟಡ ನಿರ್ಮಾಣಕ್ಕಾಗಿ ಅನುದಾವನ್ನು ಪಡೆದು ಕಾಲ ಕ್ರಮೇಣ ಸಂಸ್ಥೆಯನ್ನು ನಡೆಸದೆ ನಿಲ್ಲಿಸಲಾಗಿದೆ ಈಗ ಸದರಿ ಪ್ರದೇಶವು ವಿಷಜಂತುಗಳ ತಾಣವಾಗಿರುತ್ತೆ.

ಆದರೆ ಕಸೂರಿ ಭಾ ವಿದ್ಯಾಭಿವೃದ್ಧಿ ಸಂಸ್ಥೆಯ ಗೌರವ ಕಾರ್ಯದಶಿಯವರಾದ ಡಾ: ಜಿ.ಡಿ.ರಾಘವನ್‌ರವರು ತಮ್ಮ ರಾಜಕೀಯ ಬೆಂಬಲ, ಹಣಬೆಂಬಲ ಮತ್ತು ಮಾಜಿ ಸಚಿವರ ಬೆಂಬಲವನ್ನು ಪಡೆದು “ಆದಿಕರ್ನಾಟಕ ಹಾಸ್ಟೆಲ್” ಹೆಸರಿನ ಆಸ್ತಿಯನ್ನು ತಮ್ಮ ವಿದ್ಯಾಸಂಸ್ಥೆಯ ಹೆಸರಿಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದ್ದಾರೆ.   

ಜನಾಂಗದ ಪ್ರಸ್ತುತ ಚಿತ್ರದುರ್ಗ ನಗರಸಭೆಗೆ ಮುಕ್ತ ಮತ್ತು ಮೂಲ ದಾಖಲಾತಿಗಳೊಂದಿಗೆ ಚರ್ಚಿಸಿ ಪರಿಸ್ಥಿತಿ ಮನವರಿಕೆ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ “ಆದಿಕರ್ನಾಟಕ ಹಾಸ್ಟೆಲ್” ಹೆಸರಿಗೆ ಮರು ಖಾತೆಯನ್ನು ಮಾಡಿದ್ದು, ವಿದ್ಯಾಸಂಸ್ಥೆಯ ಮಂಡಳಿಯ ಹಿನ್ನಲೆಯಲ್ಲಿ ಮಾಜಿ ಸಚಿವರನ್ನು ಶಾಮೀಲಾಗಿ ಮತ್ತು ಸಂಘ ಸಂಸ್ಥೆಯು ಕನಿಷ್ಠ ಪ್ರಾಥಮಿಕ ಜ್ಞಾನವನ್ನು ತನ್ನ ಸಹಚರರು ಆಪ್ತರನ್ನು 9. ಸಮಿತಿಯನ್ನು ರಚಿಸಿಕೊಂಡು ಅಕ್ರಮವಾಗಿ ಈ ಜನಾಂಗದ ಆಸ್ತಿಯನ್ನು ಕಬಳಿಸುವ ದೃಷ್ಟಿಯಿಂದ ಸಮಿತಿಯನ್ನು ರಚಿಸಿರುವುದು ಕಂಡುಬರುತ್ತದೆ.

ಈ ನೊಂದಣಿ ಪ್ರಕ್ರಿಯೆಯಲ್ಲಿ ಒಂದೇ ದಿನಕ್ಕೆ ನೋಂದಣಿ ಮಾಡಿಕೊಟ್ಟ ಮಾನ್ಯತೆ ಉಪ ನಿಬಂಧಕರ ಸಂಘಸಂಸ್ಥೆಗಳ ನೊಂದಣಾಧಿಕಾರಿಗಳ ಕೈವಾಡ ಹಾಗೂ ರಾಜಕೀಯ ವ್ಯಕ್ತಿಗಳ ಒತ್ತಡ ಇರುವುದು ಹಾಗೂ ಮಾಜಿ ಸಚಿವರ ಒತ್ತಡಕ್ಕೆ ಈ ಕೃತ್ಯ ಎಸಗಿರುವುದು ಕಂಡುಬಂದಿದೆ.

ಪ್ರಯುಕ್ತ ಆದಿಯಾಗಿ ಕಾರ್ಯಕಾರಿ ಮಂಡಳಿಯ ಒಬ್ಬ ಸದಸ್ಯರು ಸಹಿ ಮತ್ತು ಕರ್ನಾಟಕ ಹಾಸ್ಟೆಲ್ ಹೆಸರಿಗೆ ಮರು ವರ್ಗಾವಣೆ ಖಾತೆಯ ನಕಲು ಅಕ್ರಮವಾಗಿ ಸಲ್ಲಿಸಿದ ನೋಂದಣಿಯನ್ನು ಈ ಕೂಡಲೇ ರದ್ದುಪಡಿಸಲು ಇಡೀ ಜಿಲ್ಲೆಯ ಮಾದಿಗ ಸಮುದಾಯದ ಪರವಾಗಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಒತ್ತಾಯಿಸಿದರು. 

ಸುದ್ದಿಗೋಷ್ಟಿಯಲ್ಲಿ ಜನಾಂಗದ ಮುಖಮಡರಾದ ಸಿ.ಕೆ.ಮಹೇಶ್, ದುರುಗೇಶಪ್ಪ, ಜಯ್ಯಣ್ಣ, ಕುಮಾರ್, ರಾಮು, ಮೈಲೇಶ್, ಜಗದೀಶ್, ಸುಧಾಕರ್, ಬಾಲರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *