Breaking
Tue. Dec 24th, 2024

ಹಳೆ ಬೆಂಗಳೂರು ರಸ್ತೆಯ ಮಂಡಕ್ಕಿ ಬಟ್ಟಿಯ ಬಳಿ ಸ್ಕೂಟರ್ ಮತ್ತು ಬೈಕ್ ಗಳ ನಡುವೆ ಅಪಘಾತ….!

ಚಿತ್ರದುರ್ಗ :  ನಗರದ ಹಳೆ ಬೆಂಗಳೂರು ರಸ್ತೆಯ ಮಂಡಕ್ಕಿ ಬಟ್ಟಿಯ ಬಳಿ ಸ್ಕೂಟರ್ ಮತ್ತು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪರಿಣಾಮ ಓರ್ವ ವ್ಯಕ್ತಿ ಸಾವು. ಈ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಅಪಘಾತಕ್ಕೆ ಕಾರಣವೇನೆಂದರೆ ವೇಗವಾಗಿ ಚಲಿಸುತ್ತಿದ್ದ ಬೈಕ್ಗಳ ನಿಯಂತ್ರಣ ತಪ್ಪಿ ವೇಗವಾಗಿ ಬಂದು  ಡಿಕ್ಕಿಯಾಗಿಯಾದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ವರವಲಯದಲ್ಲಿ ನಡೆದಿದೆ. ಗಾಯಾಳುಗಳ ಗುರುತು ಕಂಡುಬಂದಿಲ್ಲ.

ಈ ಪ್ರಕರಣವು ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪರಕರಣ ದಾಖಲಾಗಿದ್ದು ಮೃತರ ವಿಳಾಸ ಕಂಡುಬಂದಿಲ್ಲ ಎಂದು ಪೊಲೀಸರು ಸುದ್ದಿಯಲ್ಲಿ ಮಾಹಿತಿಯನ್ನು ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ಮಾಡಿದರು. 

Related Post

Leave a Reply

Your email address will not be published. Required fields are marked *