Breaking
Tue. Dec 24th, 2024

ವಯನಾಡ್‌ ಕ್ಷೇತ್ರವನ್ನು ಬಿಟ್ಟು ಸಂಸದ ರಾಹುಲ್‌ ಗಾಂಧಿ  ರಾಯ್‌ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರ…!

ನವದೆಹಲಿ  : 2019 ಮತ್ತು 2024 ರ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿರುವ ವಯನಾಡ್ ಕ್ಷೇತ್ರವನ್ನು ಬಿಟ್ಟು ಸಂಸದ ರಾಹುಲ್ ಗಾಂಧಿ ರಾಯರ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ದೆಹಲಿಯಲ್ಲಿ ನಡೆದ ಹೈಕಮಾಂಡ್‌ ಸಭೆಯ ಬಳಿಕ ತಮ್ಮ ನಿರ್ಧಾರವನ್ನು ಪ್ರದರ್ಶಿಸಿದ್ದಾರೆ.

ತಮ್ಮ ನಿಲುವಿನ ಕುರಿತು ಮಾತನಾಡಿದ ರಾಹುಲ್ ಗಾಂಧಿ ಸಭೆ, ವಯನಾಡ್ ಮತ್ತು ರಾಯ್ ಬರೇಲಿ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ವಯನಾಡ್ ನಲ್ಲಿ ಕಳೆದ 5 ವರ್ಷದಿಂದ ಸಂಸದನಿದ್ದೆ. ಅದಕ್ಕಾಗಿ ವಯನಾಡಿನ ಜನತೆಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ. ಜೀವನ ಪೂರ್ತಿ ಅವರನ್ನು ನೆನಪಿಸಿಕೊಳ್ಳುತ್ತೇನೆ.

ಈ ರಾಯ್ ಬರೇಲಿ ಜೊತೆಗೆ ಹಳೇ ಸಂಬಂಧವಿದ್ದು, ಮುಂದೆ ಅವರ ಜೊತೆಗಿರುತ್ತೇನೆ ಎಂಬ ಖುಷಿ ಇದೆ. ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರಗಳ ನಿರ್ಧಾರವನ್ನು ಸುಲಭವಾಗಿ ತೆಗೆದುಕೊಳ್ಳಲಿಲ್ಲ. ಏಕೆಂದರೆ ಕಳೆದ 5 ವರ್ಷಗಳಿಂದ ವಯನಾಡ್ ಸಂಸದನಾಗಿದ್ದರೆ ಅದ್ಬುತವಾದ ಅನುಭವ. ಎಲ್ಲ ಹಂತದಲ್ಲೂ ಜನ ಪ್ರೀತಿ, ಬೆಂಬಲ. ಕಷ್ಟದ ಸಮಯದಲ್ಲಿ ಹೋರಾಡಲು ಶಕ್ತಿ.

ಉಪ ಚುನಾವಣೆಯಲ್ಲಿ ಪ್ರಿಯಾಂಕಾ ವಯನಾಡಿನಿಂದ ನಡೆಯುತ್ತಿದೆ. ಪ್ರಿಯಾಂಕಾ ಅಲ್ಲಿಗೆ ಹೋಗುತ್ತಿದ್ದಾರೆ, ನಾನು ನಿರಂತರ ಅಲ್ಲಿಗೆ ಭೇಟಿ ನೀಡುತ್ತೇನೆ. ಪ್ರಿಯಾಂಕಾ ವಯನಾಡ್ ನಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರಲ್ಲದೇ ವಯನಾಡ್ ಜನರಿಗೆ ನಾನು, ಪ್ರಿಯಾಂಕಾ ಇಬ್ಬರು ಸಂಸದರು ಸಿಗಲಿದ್ದಾರೆ.

ಪ್ರಸಕ್ತ ವರ್ಷದ ಚುನಾವಣೆಯಲ್ಲಿ ರಾಹುಲ್ ಗಾಂಧಿಯಾಗಿದ್ದ ಎರಡೂ ಕ್ಷೇತ್ರಗಳಿಂದಲೂ ಭರ್ಜರಿ ವಿಜಯ ಸಾಧಿಸಿದ್ದರು. ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರದಲ್ಲಿ 6,87,649 ಮತಗಳನ್ನು ಪಡೆಯುವ ಮೂಲಕ 3,90,030 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರೆ, ವಯನಾಡ್ ಕ್ಷೇತ್ರದಲ್ಲಿ 6,47,445 ಮತಗಳನ್ನು ಪಡೆದು ಗೆಲುವು ಸಾಧಿಸಿರುವ ರಾಹುಲ್ 3,64,422 ಮತಗಳ ಅಂತರದಿಂದ ಗೆದ್ದು ಬೀಗಿದ್ದರು.

Related Post

Leave a Reply

Your email address will not be published. Required fields are marked *