ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸಂಭ್ರಮ. ಒಬ್ಬರಾದ ಮೇಲೆ ಒಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸ್ಪರ್ಧಿ, ನಟಿ ಸಿರಿ ಕೂಡ ಸರಳವಾಗಿ ಮದುವೆಯಾಗಿದ್ದರು. ಈಗ ನಯನಾ ನಾಗರಾಜ್ ಅವರು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ನಯನಾ ನಾಗರಾಜ್ ಅವರು ‘ಪಾಪ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಉತ್ತಮ ಗಾಯಕಿಯೂ ಆಗಿರುವ ನಯನಾ ನಾಗರಾಜ್ ಸಾಕಷ್ಟು ವೇದಿಕೆಗಳಲ್ಲಿ ಹಾಡಿದ್ದಾರೆ.
ತಮ್ಮ ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ ಅವರೊಂದಿಗೆ ನಯನಾ ನಾಗರಾಜ್ ಅವರು ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಈ ಜೋಡಿ ಹತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದೆ. ಕೆಲವು ತಿಂಗಳುಗಳ ಹಿಂದೆ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲಿಯೇ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈಗ ಸಪ್ತಪದಿ ತುಳಿದಿದೆ.
ಸುಹಾಸ್ ಶಿವಣ್ಣ ಕೂಡ ರಂಗಭೂಮಿಯಲ್ಲಿ ಗುರುತಿಸಿಕೊಂಡವರು ನಿಂತವರು. ಇವರಿಬ್ಬರು ಹಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುಹಾಸ್ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.
ಅಂದಹಾಗೆ ಈ ಜೋಡಿ ಮದುವೆಗೆ ಕನ್ನಡ ಕಿರುತೆರೆಯ ‘ನಿನಗಾಗಿ’ ಖ್ಯಾತಿಯ ರಿತ್ವಿಕ್, ನಟ ಕಹಿ ಚಂದ್ರು ಕುಟುಂಬ ಮುಂತಾದವರು ಆಗಮಿಸಿ ಶುಭ ಹಾರೈಸಿದ್ದಾರೆ.
ಸ್ನೇಹಿತರ ಸಂಭ್ರಮ ನಯನಾ ನಾಗರಾಜ್, ಸುಹಾಸ್ ಶಿವಣ್ಣ ಅವರ ಮದುವೆಯಲ್ಲಿ ಸ್ನೇಹಿತರು ಸಂಭ್ರಮಿಸಿದ್ದಾರೆ. ನಯನಾ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ಅವರು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದರು.
ನಯನಾ ನಾಗರಾಜ್ ಮದುವೆಯಲ್ಲಿ ಸಿಹಿ ಕಹಿ ಚಂದ್ರು ಅವರ ಕುಟುಂಬ ಭಾಗವಹಿಸಿ ನವ ಜೋಡಿಗೆ ಶುಭ ಹಾರೈಸಿದೆ. ನಯನಾ ನಾಗರಾಜ್, ಸುಹಾಸ್ ಶಿವಣ್ಣ ಅವರ ಮನೆಯಲ್ಲಿ ಕುಟುಂಬಸ್ಥರ ಮುಂದೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.