Breaking
Wed. Dec 25th, 2024

ಆ್ಯಪಲ್ ಸಂಸ್ಥೆ ವಿರುದ್ಧ ಮುನಿಸಿಕೊಂಡಿರುವ ಆ ಬ್ರಿಟನ್ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿ ನ್ಯಾಯದ ಮೊರೆ….!

ಲಂಡನ್, ಜೂನ್ 17 : ಆ್ಯಪಲ್ನ ಐಫೋನ್‌ಗಳು ಗೌಪ್ಯತೆಗೆ ಹೆಸರುವಾಸಿ. ಐಫೋನ್‌ನಿಂದ ಡಿಲೀಟ್ ಮಾಡಿದ ಮೆಸೇಜ್ ಅಥವಾ ಫೋಟೋ, ವಿಡಿಯೋಗಳನ್ನು ಹಿಂಪಡೆಯಲು ಆಗುವುದಿಲ್ಲ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಬಹಳ ಜನರು ಐಫೋನ್ ಅನ್ನು ಬಯಸುತ್ತಾರೆ. ಆದರೆ ಈ ಫೀಚರ್ ಕೈಕೊಟ್ಟರೆ..? ಗಂಭೀರವಾದ ತೊಂದರೆಗಳೇ ಆಗಬಹುದು.

ಬ್ರಿಟನ್ನ ವ್ಯಕ್ತಿಗೆ ಇಂಥದ್ದೊಂದು ಅನುಭವವಾಗಿದೆ, ಪತ್ನಿಯೇ ವಿಚ್ಛೇದನ ಕೊಡುವ ಮಟ್ಟಕ್ಕೆ ಅನುಭವವಾಗಿದೆ. ಈಗ ಆಯಪಲ್ ಸಂಸ್ಥೆ ವಿರುದ್ಧ ಮುನಿಸಿಕೊಂಡಿರುವ ಆ ಬ್ರಿಟನ್ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿ ನ್ಯಾಯದ ಮೊರೆ ಹೋಗಿದ್ದಾರೆ. ತಾನು ಡಿಲೀಟ್ ಮಾಡಿದ ಮೆಸೇಜ್ ಹೆಂಡತಿ ನೋಡಿದ ಪರಿಣಾಮ ಡಿವೋರ್ಸ್ ಆಗುತ್ತಿದೆ.

ಇದಕ್ಕೆ ಆಯಪಲ್ ಸಂಸ್ಥೆಯೇ ಕಾರಣ ಎಂದು ಆ ವ್ಯಕ್ತಿ ತನ್ನ ಮೊಕದ್ದಮೆಯಲ್ಲಿ ದೂರಿದ್ದಾರೆ. ಆಯಪಲ್ ವಿರುದ್ಧ ಮೊಕದ್ದಮೆ ಹಾಕಿರುವ ಬ್ರಿಟನ್ ಈ ವ್ಯಕ್ತಿ ತನ್ನ ಐಫೋನ್‌ನಲ್ಲಿನ ಐಮೆಸೇಜ್ ಆಯಪ್‌ನಲ್ಲಿ ವಿವಿಧ ವೈಶ್ಯೆಗಳೊಂದಿಗೆ ಮೆಸೇಜ್ ವಿನಿಮಯ ಮಾಡಿಕೊಂಡಿದ್ದಾನೆ. ಬಳಿಕ ಆ ಮೆಸೇಜುಗಳನ್ನು ಡಿಲೀಟ್ ಮಾಡುತ್ತಾನೆ.

ಈ ಮೆಸೇಜುಗಳನ್ನು ಆತನ ಹೆಂಡತಿ ಬೇರೊಂದು ಡಿವೈಸ್ನಲ್ಲಿ ನೋಡಿಬಿಡುತ್ತಾಳೆ. ಈ ಘಟನೆಯಿಂದ ನೊಂದ ಆ ಮಹಿಳೆ ಗಂಡನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾಳೆ. ಆಕೆಗೆ ಐದು ಮಿಲಿಯನ್ ಪೌಂಡ್ಗಳಷ್ಟು ಹಣವನ್ನು ಆ ವ್ಯಕ್ತಿ ಪರಿಹಾರವಾಗಿ ಕೊಡಲಾಯಿತು. ಐಮೆಸೇಜಿಂಗ್ ಆಯಪ್ನಿಂದ ಡಿಲೀಟ್ ಆಗಿದ್ದ ಮೆಸೇಜ್‌ಗಳು ಪತ್ನಿಗೆ ಕಣ್ಣಿಗೆ ಬೀಳದೆ ಹೋಗಿದ್ದರೆ ತಾನು ಡಿವೋರ್ಸ್ ಕೊಡುವ ಮಟ್ಟಕ್ಕೆ ಹೋಗುವುದು ಅವರ ವಾದ. 

ಇವತ್ತು ವಿವಿಧ ಸಾಧನಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಸ್ಪರ ಕನೆಕ್ಟ್ ಮಾಡಬಹುದು. ಐಫೋನ್ ಅನ್ನು ಆಯಪಲ್ನ ಬೇರೆ ಬೇರೆ ಸಾಧನಗಳಿಗೆ ಸಿಂಕ್ರೊನೈಸ್ ಮಾಡಬಹುದು. ಬ್ರಿಟನ್ನ ಈ ವ್ಯಕ್ತಿಯ ಐಫೋನ್ ಅನ್ನು ಆತನ ಕುಟುಂಬದ ಐಮ್ಯಾಕ್ ಸಿಸ್ಟಂಗೆ ಸಿಂಕ್ರೊನೈಸ್ ಮಾಡಲಾಗಿದೆ.

ಇಲ್ಲಿ ಆ ವ್ಯಕ್ತಿ ತನ್ನ ಮೊಬೈಲ್‌ನಲ್ಲಿದ್ದ ಮೆಸೇಜ್ ಅನ್ನು ಡಿಲೀಟ್ ಮಾಡಿದಾಗ ಈತನ ಸಾಧನದಲ್ಲಿ ಮಾತ್ರವೇ ಅದು ಡಿಲೀಟ್ ಆಗುತ್ತಿದೆ. ಈತನ ಜತೆ ಸಿಂಕ್ರೊನೈಸ್ ಫೋನ್ ಆಗಿದ್ದ ಐಮ್ಯಾಕ್‌ನಲ್ಲಿ ಆ ಮೆಸೇಜ್ ಡಿಲೀಟ್ ಆಗಿರಲಿಲ್ಲ. ಹೀಗಾಗಿ, ಐಮ್ಯಾಕ್ನಲ್ಲಿ ಈತನ ಮೆಸೇಜುಗಳನ್ನು ಪತ್ನಿಗೆ ಓದಲು ಸಾಧ್ಯವಾಯಿತು. 

ಆಯಪಲ್ ವಿರುದ್ಧ ದೂರು ಕೊಟ್ಟಿರುವ ವ್ಯಕ್ತಿ ಏನೆಂದರೆ, ತಾನು ಮೆಸೇಜ್ ಮಾಡಿದ್ದೇನೆ, ಈ ಮೆಸೇಜ್ ಈ ಸಾಧನದಲ್ಲಿ ಮಾತ್ರವೇ ಡಿಲೀಟ್ ಆಗುತ್ತದೆ ಎಂದು ಎಚ್ಚರಿಸುವ ವಾರ್ನಿಂಗ್ ಬಂದರೆ ಸಾಕಾಗುವುದಿಲ್ಲ, ಎಚ್ಚೆತ್ತುಕೊಳ್ಳಬಹುದು.

ಈ ಸಾಧನ ಸಿಂಕ್ ಆಗಿರುವ ಬೇರೆ ಡಿವೈಸ್‌ಗಳಲ್ಲಿ ಮೆಸೇಜ್ ಲಭ್ಯವಿರುತ್ತದೆ ಎಂದು ತೋರುತ್ತದೆ. ಆಯಪಲ್ ಸಂಸ್ಥೆಯಿಂದ ತನಗೆ ಬಹಳ ಹಾನಿಯಾಗಿದೆ ಎಂದು ಆ ವ್ಯಕ್ತಿ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದೀಗ ಅದು ಕ್ಲ್ಯಾಸ್ ಆ್ಯಕ್ಷನ್ ಮೊಕದ್ದಮೆಯಾಗಿ ತಿರುಗಿದ್ದು, ಆ್ಯಪಲ್ ವಿರುದ್ಧ ಇಂಥ ಅಸಮಾಧಾನ ಇರುವವರು ಕೈಜೋಡಿಸಿದ್ದರು.

Related Post

Leave a Reply

Your email address will not be published. Required fields are marked *