Breaking
Mon. Dec 23rd, 2024
ಬೆಂಗಳೂರು : ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿಯವರು ಸ್ಪೋಟಕವಾದ ಭವಿಷ್ಯವನ್ನು ನುಡದಿದ್ದಾರೆ. ದೇಶ ವಿದೇಶದ ಘರ್ಷಣೆಗಳು, ಬಾಂಬ್ ಸ್ಪೋಟ ಸೇರಿದಂತೆ ಪ್ರಕೃತಿ ವಿಕೋಪ ರಾಜ್ಯ ರಾಜಕಾರಣ ದೇಶದ ರಾಜಕೀಯ ವಿಷಯಗಳ ಬಗ್ಗೆ ಈ ಭವಿಷ್ಯದಲ್ಲಿ ಅಡಕವಾಗಿರುವ ವಿಷಯವಾಗಿವೆ.
ಶ್ರೀ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿಯವರು ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಹಲವು ನಾಯಕರು ಹೇಳಿಕೆಯನ್ನು ನೀಡುತ್ತಿದ್ದರು. ಈ ಬಗ್ಗೆ ರಾಜಕೀಯ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಆದರೆ ಗುರು ಶಿಷ್ಯಗಳಾಗುತ್ತಾರೆ, ಶಿಷ್ಯಂದರು ಗುರುಗಳಾಗುತ್ತಾರೆ. ಹೆಣ್ಣು ಮಕ್ಕಳ ಪ್ರಾಬಲ್ಯ ಹೆಚ್ಚಾಗುತ್ತದೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಯಾವುದೇ ಆಪತ್ತು ಇರುವುದಿಲ್ಲ ಶ್ರವಣದಲ್ಲಿ ನಾನು ಮತ್ತೊಂದು ಸ್ಪೋಟಕ ಭವಿಷ್ಯ ಹೇಳುತ್ತೇನೆ. ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರವಣದಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಬಿಜೆಪಿ ಬಹುಮತ ಬಾರದಿದ್ದಕ್ಕೆ ನ್‌ಡಿಎ ಮೈತ್ರಿ ಸರ್ಕಾರ ರಚನೆ ಮಾಡಿದ್ದು ಇದು ಜನರಿಗೆ ತಿಳಿದ ವಿಷಯವಾಗಿದೆ ಆದರೆ ಈ ಸರ್ಕಾರವು ಬಹಳ ದಿನಗಳ ಕಾಲ ಉಳಿಯುವುದಿಲ್ಲ ಎಂದು ವಿಪಕ್ಷಗಳು ಭವಿಷ್ಯದ ನಡುವೆ ಕೋಡಿಮಠದ ಶ್ರೀಗಳಾದ ಶಿವನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಪ್ರತಿಕ್ರಿಯಿಸಿ ಸರ್ಕಾರ ಹಾಗೂ ಮೋದಿ ಅವರ ಬಗ್ಗೆ ಶ್ರವಣದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಕ್ರೋಧ ಮದ ಮತ್ಸರ ದ್ವೇಷ ಅಸೂಯಗಳು ಹೆಚ್ಚಾಗುತ್ತವೆ ಕ್ರೋಧಿ ನಾಮ ಸಂವತ್ಸರದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು ಅಂತ ಸ್ವಾಮೀಜಿಯವರು ತಿಳಿಸಿದರು. ದೇಶದಲ್ಲಿ ಪಂಚಘಾತಗಳು ಸಂಭವಿಸುತ್ತವೆ, ಯುದ್ಧ ಭೀತಿ ಪ್ರಧಾನಿಗಳ ಬಗ್ಗೆ ಸ್ವಾಮೀಜಿಯವರು ಸ್ಪೋಟಕವಾದ ಮಾಹಿತಿಯನ್ನು ಈ ವರ್ಷ ಆಗಲಿದೆ ಎಂದು ತಿಳಿಸಿದ್ದಾರೆ ಪರದೇಶದಲ್ಲಿ ಜಲಪ್ರಳಯ ಬಾಂಬ್ ಸ್ಫೋಟಗಳು ಕೇಳಿ ಬರುತ್ತಿವೆ. ದೊಡ್ಡ ದೊಡ್ಡ ಜನರಿಗೆ ಆಗತದ ಬಗ್ಗೆ ಹೇಳಿದ್ದೆ ಅದು ನಡೆಯುತ್ತಿದೆ ಈಗಲೂ ನಡೆಯುತ್ತಿದೆ ಅಂತ ಕೋಡಿಮಠದ ಸ್ವಾಮೀಜಿಯವರು ತಿಳಿಸಿದರು. 

Related Post

Leave a Reply

Your email address will not be published. Required fields are marked *