ಬೆಂಗಳೂರು : ಕರ್ನಾಟಕ ಸರ್ಕಾರವು ಶಾಲಾ ವಾಹನಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಈ ನಿಯಮವನ್ನು ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ತಕ್ಷಣವೇ ವಾಹನ ಮಾಲೀಕರು ಈ ನಿಯಮವನ್ನು ಅಳವಳಿಸಬೇಕೆಂದು ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳಿಗೆ ಕರ್ನಾಟಕ ರಿಜಿಸ್ಟ್ರೇಷನ್ ಹೊಂದಿರಬೇಕು.
ಈ ಕ್ಯಾಬ್ ಗಳು ಶಾಲಾ ಮಕ್ಕಳನ್ನು ಸಾಗಿಸಲು ಬಳಸಲಾಗುತ್ತದೆ ಎಂಬ ಪ್ರತ್ಯೇಕ ದಾಖಲೆಗಳನ್ನು ರಿಜಿಸ್ಟರ್ ಮಾಡಿಕೊಳ್ಳಬೇಕು ಈ ದಾಖಲೆಯನ್ನು ಪೋಷಕರು ಅಥವಾ ಶಾಲೆಯ ಆಡಳಿತದಿಂದ ಪಡೆದುಕೊಳ್ಳಬಹುದು ನಂತರ ಈ ಪತ್ರವನ್ನು ನೀಡಿ ತಮ್ಮ ವಾಹನವನ್ನು ನೋಂದಾಯಿಸಲು ನೋಂದಣಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕೆಂದು ಹೇಳಲಾಗಿದೆ.