ಸ್ಯಾಂಡಲ್ ವುಡ ನಲ್ಲಿ ಹೆಚ್ಚು ಪ್ರಖ್ಯಾತಗಳಿಸಿರುವ ಚಿತ್ರ ನಟ ದರ್ಶನ್ ಬಂಧನಕ್ಕೆ ಒಳಪಡಿಸಿ ಸಂಪೂರ್ಣ ಒಂದು ವಾರ ಕಳೆದಿದ್ದು ಎಂಟು ದಿನಗಳಿಂದ ನಟ ಪೊಲೀಸ್ ಠಾಣೆಯಲ್ಲಿದ್ದಾರೆ ಚಿತ್ರರಂಗದಲ್ಲಿ ರಾಜಕೀಯ ರಂಗದಲ್ಲಿ ಹತ್ತಾರು ಗಣ್ಯರ ಸ್ನೇಹವನ್ನು ಹೊಂದಿರುವ ದರ್ಶನ್ ಅವರನ್ನು ಬಿಡಿಸಲು ಯಾರು ಸಹ ಮುಂದೆ ಬರುವ ಸಾಹಸ ಮಾಡಿಲ್ಲ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ವಕೀಲರನ್ನ ಸಂಪರ್ಕಿಸಿ ದರ್ಶನ್ ಪರ ಜಾಮೀನು ಪಡೆಯಲು ಹೋರಾಟ ಮಾಡುತ್ತಿರುವ ವಿಚಾರವು ಎಲ್ಲರಿಗೂ ಗೊತ್ತಿದೆ ಅದರ ಬೆನ್ನಿನಲ್ಲಿ ದರ್ಶನ್ ಆಪ್ತರು ಏನೋ ಮಾಡಲ್ಲ ಆಗುತ್ತಿಲ್ಲ ಎಂಬ ಪ್ರಶ್ನೆ ಹಲವರಿಗೆ ಕಾಡುತ್ತಿದೆ. ಆದರೆ ಹಲವಾರು ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ ಒಬ್ಬ ವ್ಯಕ್ತಿ ಮಾತ್ರ ದರ್ಶನ್ ಪರ ಹೋರಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಖ್ಯಾತ ರಾಜಕಾರಣಿ ಮಾತ್ರವಲ್ಲದೆ ಸದ್ಯ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರ ಸಂಪುಟದ ಸಚಿವರೊಬ್ಬರು ದರ್ಶನ್ ಬಿಡುಗಡೆಗೆ ಸತ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಪ್ರಯತ್ನಿಸಿ ಹಿಂದೇಟು ಅನುಭವಿಸಿದ್ದ ಸಚಿವರು ಇದೀಗ ನೇರವಾಗಿ ಗೃಹಮಂತ್ರಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ಪದೇ ಪದೇ ದರ್ಶನ್ ಪರ ವಹಿಸುತ್ತಿರುವ ಈ ಸಚಿವರಿಗೆ ಪ್ರಕರಣದ ಗಂಭೀರತೆ ಬಗ್ಗೆ ತಿಳಿಸಲು ಗೃಹ ಸಚಿವ ಪರಮೇಶ್ವರ್ ಕಾನೂನು ಸಚಿವ ಎಚ್ ಕೆ ಪಾಟೀಲ್ ಗೆ ಕರೆ ಮಾಡಿ ತಮ್ಮ ನಿವಾಸಕ್ಕೆ ಬರುವಂತೆ ಹೇಳಿದ್ದಾರೆ ಜಿ ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ ಕಾನೂನು ಸಚಿವ ಮೊದಲು ದರ್ಶನ್ ಪರ ಬಂದ ಸಚಿವರಿಗೆ ಪ್ರಕರಣದ ಗಂಭೀರತೆ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದರು.
ಗೃಹ ಸಚಿವರು ಹಾಗೂ ಕಾನೂನು ಸಚಿವರು ದರ್ಶನ್ ಗೆ ಮುಂದೆ ಬರಬಹುದಾದ ಸಂಕಷ್ಟದ ಬಗ್ಗೆ ಚರ್ಚೆ ನಡೆಸಿ ಈ ಪ್ರಕರಣದಲ್ಲಿ ನೀವು ಬಂದರೆ ಸರ್ಕಾರದ ಮೇಲೆ ವೈಪೆರಿತ್ಯ ಬೀರುತ್ತದೆ. ತನಿಖೆ ವೇಳೆ ಮಧ್ಯ ಪ್ರವೇಶಿಸುವುದು ಕಷ್ಟ ಪ್ರಭಾವಿಗಳು ಬಂದರೆ ಅವರು ಕೂಡ ಸಿಲುಕಿ ಹಾಕಿಕೊಳ್ಳಬಹುದು ಎಂದು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ದರ್ಶನ್ ಪರ ಬಂದ ಸಚಿವರು ಆತನನ್ನು ಕಾಪಾಡಿ ಎಂದು ಕಣ್ಣೀರಿಟ್ಟು ಗೃಹ ಸಚಿವ ಪರಮೇಶ್ವರ್ ಅವರ ಕಾಲಿಗೆ ಬೀಳಲು ಮುಂದಾದರು ಎಂದು ವರದಿಯಾಗಿದೆ. ಸಚಿವರು ಹಾಗೂ ದರ್ಶನ್ ಆಪ್ತತೆಯ ಬಗ್ಗೆ ಅರಿವಿದ್ದ ಗೃಹ ಸಚಿವರು ಈ ಪ್ರಕರಣದ ತನಿಖೆಯಲ್ಲಿ ತಲೆ ಹಾಕುವುದು ಸೂಕ್ತವಲ್ಲ ಎಂದು ಬುದ್ಧಿವಾದ ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ.
ಸದ್ಯ ಈ ಪ್ರಕರಣವನ್ನು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದು ಪೊಲೀಸರು ಕೂಡ ನಿಷ್ಪಕ್ಷಪಾತವಾಗಿ ತೀವ್ರ ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎನ್ನುವ ನಿಟ್ಟಿನಲ್ಲಿ ತನಿಖೆ ಚುರುಕಾಗಿ ನಡೆಯುತ್ತಿದೆ.