ಹೈದರಾಬಾದ್ : ಟಾಲಿವುಡ್ ನ ಹೆಚ್ಚು ಜನಪ್ರಿಯತೆ ಹೊಂದಿರುವ ನಟ ಹಾಗೂ ಜನ ಸೇನಾ ಮುಖ್ಯಸ್ಥ ಪಿತಾಪುರಂ ಶಾಸಕ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಇಂದು ಅಧಿಕಾರ ವಹಿಸಿಕೊಂಡರು. ವಿಜಯವಾಡದ ಸೂರ್ಯವಾರ್ ಪೇಟೆಯಲ್ಲಿರುವ ಅವರು ಕಚೇರಿಯಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭವನ್ನು ನಡೆಸಲಾಯಿತು ಎಲ್ಲಿ ಅವರು ವೈದಿಕ ಮಂತ್ರಗಳು ಮತ್ತು ವಿದ್ವಾಂಸರ ಆಶೀರ್ವಾದ ನಡುವೆ ತಮ್ಮ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡರು.
ರಾಜಕೀಯ ರಂಗದಲ್ಲಿ ತಮ್ಮದೇ ಆದ ಹೊಸ ಅಧ್ಯಾಯನವನ್ನು ಬರೆಯಲು ಮುಂದಾಗಿರುವ ಪವನ್ ಕಲ್ಯಾಣ್ ಅವರು ಜನ ಸೇನಾ ಪಕ್ಷವನ್ನು ಆಂಧ್ರಪ್ರದೇಶದಲ್ಲಿ ಸ್ಥಾಪಿಸಿ ಈ ಪಕ್ಷದ ಮುಂದಾಳತ್ವವನ್ನು ವಹಿಸಿ ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು .
ಕ್ಷೇತ್ರದ ಜನರ ಕಷ್ಟಗಳನ್ನು ಬಗೆಹರಿಸಲು ಹಾಗೂ ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರುವ ಇವರು ದೇಶದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವ ಉದ್ದೇಶದಿಂದ ಜನ ಸೇನಾ ಪಕ್ಷಕ್ಕೆ ಉತ್ತಮವಾದ ಬೆಂಬಲ ನೀಡಿ 21 ಕ್ಷೇತ್ರಗಳನ್ನು ಗೆಲ್ಲಿಸುವ ಮೂಲಕ ಪವನ್ ಕಲ್ಯಾಣ್ ಆಸೆಯನ್ನು ಈಡೇರಿಸಿದ್ದಾರೆ ಹಾಗೂ ಈ ಕ್ಷೇತ್ರದ ಜನರಿಗೆ ತಮ್ಮ ಪಕ್ಷದಿಂದ ಹಾಗೂ ಕಾರ್ಯಕರ್ತರಿಗೆ ಸಿಗಬೇಕಾದ ಸೌಲಭ್ಯಗಳು ಸರ್ಕಾರದಿಂದ ವಂಚಿತವಾಗಿರುವ ಬೇಡಿಕೆಗಳನ್ನು ಈಡೇರಿಸಿ ತಮ್ಮ ಮನೆಯ ಮಗನಾಗಿ ಕಾರ್ಯನಿರ್ವಹಿಸುವುದಾಗಿ ತಮ್ಮ ಬೆಂಬಲಸದ ಇರುವಂತೆ ಮನವಿ ಮಾಡಿದರು.
ಈ ಕ್ಷಣಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಈಗ ತಮ್ಮ ನಾಯಕನಿಗೆ ಅಂತಿಮವಾಗಿ ಬದಲಾವಣೆ ತರುವ ಶಕ್ತಿ ಮೀರಿದೆ ಎಂಬ ಅಂಶವನ್ನು ಇಲ್ಲಿನ ಜನರು ಅರಸಿ ಹಾರೈಸಿದರು.