ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಕೆಯಲ್ಲಿ ಸ್ಪೋಟಕವಾದ ಮಾಹಿತಿ ಬೆಳಕಿಗೆ ಬಂದಿದೆ. ಚಿತ್ರನಟ ದರ್ಶನ್ ಸೇರಿದಂತೆ ಆತನ ಸಹಚಾರರಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದು ಮೊದಲಿಗೆ ರೇಣುಕಾ ಸ್ವಾಮಿ ಯನ್ನು ಶೆಡ್ ನಲ್ಲಿ ಚಿತ್ರಹಿಂಸೆ ಇಟ್ಟು ಮರ್ಡರ್ ಮಾಡಲಾಗಿತ್ತು ಎನ್ನಲಾಗಿದೆ.
ಬಳಿಕ ರೇಣುಕಾ ಸ್ವಾಮಿಯ ಮೃತ ದೇಹವನ್ನು ಮೊದಲು ಶೆಡ್ ನಲ್ಲಿ ಹಾಕಿದ್ದು ನಂತರ ಈ ಸೆಡ್ ನಲ್ಲಿ ಸೆಕ್ಯೂರಿಟಿ ಕಾವಲಿದ್ದು, ಸೆಕ್ಯೂರಿಟಿ ರೂಮಿನಲ್ಲಿ ಇರುವುದು ಬೆಳಕಿಗೆ ಬಂದಿದೆ. ಪೊಲೀಸರ ತನಿಕೆ ವೇಳೆಯಲ್ಲಿ ಸೆಕ್ಯೂರಿಟಿ ರೂಮ್ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು. ಸೆಕ್ಯೂರಿಟಿ ರೂಮ್ನಲ್ಲಿ ಕೂಡ ಪೊಲೀಸರು ಸ್ಥಳ ಮಾಜರು ಮಾಡಿದ್ದರು ನಂತರ ಸೆಕ್ಯೂರಿಟಿ ಗಾರ್ಡನ್ನು ಕರೆದು ವಿಚಾರಿಸಿ ಕೊಲೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಈವರೆಗೆ ಡಿ ಗ್ಯಾಂಗ್ ಅನ್ನು ಪೊಲೀಸರು ವಿಚಾರಣೆಯಲ್ಲಿ ಸ್ಥಳ ಮಾಜರು ಮಾಡಿದ ವಿವರಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ
- ದರ್ಶನ್ ಪವಿತ್ರ ಸೇರಿ ಡಿ ಗ್ಯಾಂಗ್ ಕರೆ ತಂದ ಶೆಡ್ ನಲ್ಲಿ ಸ್ಥಳಮಾಜರು.
- ಗಿರಿನಗರದ ಪ್ರದೋಶ್ ನಿವಾಸದಲ್ಲಿ ಸ್ಥಳಮಾಜರು.
- ಶವ ಬೀಸಾಡಿದ್ದ ಅನುಗ್ರಹ ಅಪಾರ್ಟ್ಮೆಂಟ್ ಬಳಿ ಸ್ಥಳಮಾಜರು.
- ಸ್ವಾಮಿ ಕೊಲೆಯಾದ ಪಟ್ಟಣಗೆರೆ ಶೆಡ್ ಮಾಲೀಕರಾದ ಜಯಣ್ಣ ಬಳಿ ವಿಚಾರಣೆ .
- ಆರ್ ಆರ್ ನಗರದ ರೇಡಿಯಲ್ ಹೋಮ್ಸ್ ಇ ಕ್ರಾಸ್ ನಲ್ಲೂ ಸ್ಥಳಮಾಜರು.
- ಚಿತ್ರದುರ್ಗದಿಂದ ಕಿಡ್ನಾಪ್ಗೆ ಬಳಸಿದ ಕಾರು ಪರಿಶೀಲನೆ ಕಾರಿನೊಳಗೆ ರಕ್ತ ಕೂದಲು ಪತ್ತೆ.
- ಐಡಿಯಲ್ ಹೋಂನಲ್ಲಿ ಬಟ್ಟೆ ಬದಲಾಯಿಸಿದ ಆರೋಪಿಗಳು.
- ಟ್ರೋಬೋ ಹೋಟೆಲ್ನ ರೂಮ್ ನಂಬರ್ 203ರಲ್ಲಿ ಮಾಜರು
- ಆರ್ ಆರ್ ನಗರದ ದರ್ಶನ್ ನಿವಾಸದಲ್ಲೂ ದರ್ಶನ್ ಬಟ್ಟೆ ಶೋ ವಶಕ್ಕೆ.
- ಪವಿತ್ರ ಗೌಡ ಕರೆದೊಯ್ದು ಆರ್ ಆರ್ ನಗರದ ನಿವಾಸದಲ್ಲಿ ಪವಿತ್ರ ಗೌಡರ ಬಟ್ಟೆ ವಶಕ್ಕೆ.
- ಆರೋಪಿ ದೀಪಕ್ ಕರೆದೊಯ್ದ ಮನೆಯಲ್ಲಿ ಸ್ಥಳಮಾಜರು.
- ಆರೋಪಿ ವಿನಯ್ ಕರೆದು ಇದು ಸ್ಟೋನಿ ಬ್ರೊಕನಲ್ಲಿ ಸ್ಥಳ ಮಜಾರು.
- ದರ್ಶನ್ ಪತ್ನಿ ವಿಜಯಲಕ್ಷ್ಮಿ ನಿವಾಸದಲ್ಲಿ ನೀಲಿ ಕಲರ್ ಶೂ ವಶಕ್ಕೆ.
- ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಕೇಸ್ ನಲ್ಲಿ ನಟ ದರ್ಶನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ಪ್ರಕರಣವನ್ನು ಮುಚ್ಚು ಹಾಕಲು 30 ಲಕ್ಷ ಹಣ ನೀಡಿರುವುದಾಗಿ ತಿಳಿಸಿದ್ದಾರೆ.
ಪೋಲಿಸ್ ವಿಚಾರಣೆಯಲ್ಲಿ ನಟ ದರ್ಶನ್ ಅಲಿಯಾಸ್ ಡಿ ಬಾಸ್ ಸ್ವಚ್ಛ ಹೇಳಿಕೆ ನೀಡಿದ್ದು ಅದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಕೊಲೆಯಾದ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡಿ ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬಾರದಂತೆ ಮಾಡಬೇಕು ಎಂದು ಪೊಲೀಸರು ಲಾಯರು ಮತ್ತು ಶಬಸಾಗಿಸುವವರ ವ್ಯಕ್ತಿಗಳಿಗೆ ಪ್ರದೋಶ್ ಗೆ 30 ಲಕ್ಷ ಹಣ ನೀಡಿರುವುದಾಗಿ ದರ್ಶನ್ ಸ್ವಚ್ಛ ಹೇಳಿಕೆ ನೀಡಿದ್ದಾರೆ. ಪಟ್ಟಣಗೆರೆಯ ಶೆಡ್ ನಲ್ಲಿ ನಡೆದ ಹಲ್ಲೆಯೂ ತಾನು ಭಾಗಿಯಾಗಿದ್ದೇನೆ ಎಂದು ದರ್ಶನ್ ಒಪ್ಪಿಕೊಂಡಿಲ್ಲ ಸಿಸಿ ಕ್ಯಾಮೆರಾ ಗಳು ಜೂನ್ 8ರಂದು ರಾತ್ರಿ ದರ್ಶನ್ ತನ್ನ ಜಿಪಿನಲ್ಲಿ ಆಗಮಿಸಿದ್ದನ್ನು ತೋರಿಸಿವೆ ಹತ್ಯೆಯ ನಂತರ ದರ್ಶನ್ ಆರೋಪಿಗಳ ಜೊತೆ ಪಾರ್ಟಿ ಮಾಡಿದ್ದು ಕೂಡ ಪ್ರತ್ಯೇಕ ದರ್ಶಿಗಳು ಸಾಕ್ಷಿಯಿಂದ ಗೊತ್ತಾಗಿದೆ ಆದರೆ ಪಟ್ಟಣಗೆರೆಯ ಶೆಡ್ನಲ್ಲಿ ಯಾವುದೇ ಸಿಸಿಟಿವಿ ಸಾಕ್ಷಿಗಳನ್ನು ಆರೋಪಿಗಳು ಉಳಿಸಿಲ್ಲ.