ತಮಿಳುನಾಡಿನ : ಕಲ್ಲಕುರಿಚಿಯಲ್ಲಿ ಕಳ್ಳ ಭಟ್ಟಿ ಕುಡಿದ ಪರಿಣಾಮ 29 ಮಂದಿ ಮೃತಪಟ್ಟಿದ್ದು ಮತ್ತು 60ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆಂದು ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ತಿಳಿಸಿದ್ದಾರೆ ಮತ್ತು ಈ ತನಿಖೆಯನ್ನು ಚುರುಕುಗೊಳಿಸಿ ಈ ಸಾವು ನೋವುಗಳಿಗೆ ಕಾರಣ ಏನೆಂಬುದನ್ನು ತಿಳಿಸಲು ಸಿಬಿ ಸಿಐಡಿ ಗೆ ತನಿಖೆಗೆ ಆದೇಶ ನೀಡಿದ್ದಾರೆ.
ಕಲ್ಲಕುರಿಚಿಯಲ್ಲಿ ಕಲಬರಕ್ಕೆ ಮಧ್ಯ ಸೇವಿಸಿ 29 ಮಂದಿ ಸಾವನ್ನಪ್ಪಿರುವ ಸುದ್ದಿ ತಿಳಿದು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ತುಂಬಾ ಆಘಾತವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಬಂಧಿಸಲಾಗಿದೆ ಇದನ್ನು ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಕ್ಷಣವೇ ಸಮಾಜವನ್ನು ಹಾಳು ಮಾಡುತ್ತಿರುವ ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಮಿಳುನಾಡಿನ ಡಿ.ಎಂ.ಕೆ ಸರ್ಕಾರ ಕಳ್ಳಬಟ್ಟಿ ಸಾಗಾಣಿಕೆ ವಿರುದ್ಧ ಹೆಚ್ಚಿನ ಕ್ರಮ ಕೈಗೊಳ್ಳಲಿದೆ ಇರುವ ಜಿಲ್ಲಾಧಿಕಾರಿ ಶ್ರವಣಕುಮಾರ್ ಜತಾವತ್ ಅವರನ್ನು ವರ್ಗಾವಣೆ ಮಾಡಿದೆ. ಇವರ ಸ್ಥಾನಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ಎಂಎಸ್ ಪ್ರಶಾಂತ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಎಂ ಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಕಲ್ಕುರ್ಚಿ ಎಸ್ ಪಿ ಸಮಯ್ಸಿಂಗ್ ಮೇನ ಅವರನ್ನು ಅಮಾನತುಗೊಳಿಸಿದೆ ಮತ್ತು ಅವರ ಸ್ಥಾನಕ್ಕೆ ರಜತ್ ಚಿತ್ರವೇದಿ ಎಂಬ ಹೊಸ ಎಸ್ಪಿಯನ್ನು ನೇಮಕ ಮಾಡಲಾಗಿದೆ ಇನ್ನು ಹೆಚ್ಚುವರೆಯಾಗಿ ಕಲ್ಕುರ್ಚಿ ಜಿಲ್ಲೆಯಲ್ಲಿ ಸೇರಿದಂತೆ ಒಂಬತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.