ಹಜ್ ಯಾತ್ರೆಯ ವೇಳೆ ಮೆಕ್ಕಾದಲ್ಲಿ ಉಷ್ಣಾಂಶ ಹೆಚ್ಚಾಗಿ ಯಾತ್ರಾರ್ಥಿಗಳ ಸಾವು ಪ್ರಕರಣದಲ್ಲಿ ಚಿತ್ರದುರ್ಗ ಮೂಲದ ಯಾತ್ರಾರ್ಥಿ ಸಾವು ಕಂಡಿದ್ದಾರೆ. ಮೆಕ್ಕಾದ ಅರ್ಫಾತ್ ಗೌಂಡ್ ನಲ್ಲಿ ಚಿತ್ರದುರ್ಗ ಮೂಲದ ರುಕ್ಸಾನಾ ಕೌಸರ್ (63) ಮೃತಪಟ್ಟಿದ್ದಾರೆ.
ನಿವೃತ್ತ ಶಿಕ್ಷಕಿ, ನಗರದ ಮಂಡಕ್ಕಿ ಭಟ್ಟಿ ಏರಿಯಾ ನಿವಾಸಿ ರುಕ್ಸಾನಾ ಕೌಸರ್ ಅವರು ಹಜ್ ಯಾತ್ರೆಗೆ ತೆರಳಿದ್ದರು. ಬಿಸಿಲಿನ ತಾಪ ಹೆಚ್ಚಾಗಿ ರುಕ್ಸಾನಾ ಕೌಸರ್ ಸಾವನ್ನಪ್ಪಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಮೆಕ್ಕಾದಲ್ಲೇ ನೆರವೇರಿಸುವ ಸಾಧ್ಯತೆ ಎಂದು ಮಾಹಿತಿ ಲಭ್ಯವಾಗಿದೆ.