ಟಿ20 ವಿಶ್ವಕಪ್ 9ನೇ ಆವೃತ್ತಿ : ಟಿ20 ವಿಶ್ವಕಪ್ಗೆ 12 ತಂಡಗಳು ನೇರ ಅರ್ಹತೆ ಪಡೆದಿರುವುದು. ಅಂದರೆ 2026 ರಲ್ಲಿ ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ 12 ತಂಡಗಳು ಫೈನಲ್ ಆಗಿವೆ. ಭಾರತ ಮತ್ತು ಶ್ರೀಲಂಕಾ ತಂಡವು ಆತಿಥ್ಯ ರಾಷ್ಟ್ರವಾಗಿರುವುದರಿಂದ 2026 ರ ಟಿ20 ವಿಶ್ವಕಪ್ಗೆ ಡೈರೆಕ್ಟ್ ಎಂಟ್ರಿಯಾಗಿದೆ. ಹಾಗೆಯೇ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿದು ಸೂಪರ್-8 ಹಂತಕ್ಕೇರಿರುವ ಯುಎಸ್ಎ ತಂಡವು ಮುಂಬರುವ ಟಿ20 ವಿಶ್ವಕಪ್ನಲ್ಲೂ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟಿ20 ವಿಶ್ವಕಪ್ಗೆ ಅರ್ಹತೆ ಪಡೆದಿರುವ 12 ತಂಡಗಳು:
- ಭಾರತ
- ಶ್ರೀಲಂಕಾ
- ಅಫ್ಘಾನಿಸ್ತಾನ್
- ಆಸ್ಟ್ರೇಲಿಯಾ
- ಬಾಂಗ್ಲಾದೇಶ್
- ಇಂಗ್ಲೆಂಡ್
- ಸೌತ್ ಆಫ್ರಿಕಾ
- ಯುಎಸ್ಎ
- ವೆಸ್ಟ್ ಇಂಡೀಸ್
- ನ್ಯೂಝಿಲೆಂಡ್
- ಪಾಕಿಸ್ತಾನ್
- ಐರ್ಲೆಂಡ್
8 ತಂಡಗಳಿಗೆ ಅವಕಾಶ : 2026ರ ಟಿ20 ವಿಶ್ವಕಪ್ನಲ್ಲೂ 20 ತಂಡಗಳು ಕಣಕ್ಕಿಳಿಯಲಿದ್ದು, ಇದೀಗ 12 ತಂಡಗಳು ಫೈನಲ್ ಆಗಿವೆ. ಇನ್ನುಳಿದ 8 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಈ ಸುತ್ತಿನ ಮೂಲಕ ಒಟ್ಟು 8 ತಂಡಗಳು ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಬಹುದು.
ಟಿ20 ವಿಶ್ವಕಪ್ 2026 ರ ಆಯೋಜನೆಯ ಹಕ್ಕನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಭಾರತೀಯ ಕ್ರಿಕೆಟ್ ಮಂಡಳಿ ಪಡೆದುಕೊಂಡಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್ ಅನ್ನು ಉಭಯ ದೇಶಗಳು ಜಂಟಿಯಾಗಿ ಆಯೋಜಿಸಲಿದೆ. ಅದರಂತೆ ಕೆಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದರೆ, ದ್ವಿತೀಯ ಸುತ್ತಿನ ಪಂದ್ಯಗಳಿಗೆ ಭಾರತ ಆತಿಥ್ಯವಹಿಸುವ ಸಾಧ್ಯತೆಯಿದೆ.