ಬೆಂಗಳೂರು : ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಕೇಸ್ ಪ್ರಕರಣದಲ್ಲಿ ಇಂದು ವಿಚಾರಣೆ ನಡೆಸಿದ ಎಸಿಎಂಎಂ ಕೋರ್ಟ್ ದರ್ಶನ್ ಸೇರಿದಂತೆ ಆರು ಆರೋಪಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇನ್ನುಳಿದ ಆರೋಪಿ ಪವಿತ್ರ ಗೌಡ ಸೇರಿದಂತೆ ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎಂದು ಕೋರ್ಟ್ ಸೂಚಿಸಿದೆ.
ಆರೋಪಿಗಳ ಕಸ್ಟಡಿ ಇದೀಗ ಅಂತ್ಯವಾದ ಹಿನ್ನೆಲೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಇಂದು ಕೋರ್ಟಿಗೆ ಆಜರುಪಡಿಸಲಾಯಿತು. ಮೃತ ಹಾಗೂ ಆರೋಪಿಯ ಮೊಬೈಲ್ ಗಳನ್ನು ಕಲೆ ಹಾಕಬೇಕು ಇದರಿಂದ ಹೆಚ್ಚು ಮಾಹಿತಿ ಸಿಗಲಿದೆ. ಇದು ಬೀಕರ ಕೊಲೆ ಕೇಸು ಆದ್ದರಿಂದ ಇನ್ನಷ್ಟು ಮಾಹಿತಿ ಪತ್ತೆ ಹಚ್ಚಬೇಕಾಗಿದೆ. ಆದ್ದರಿಂದ ದರ್ಶನ್, ವಿನಯ್, ಪ್ರದೋಶ್, ಧನರಾಜ್, ನಾಗರಾಜ್, ಲಕ್ಷ್ಮಣ್ ಆರೋಪಿಗಳನ್ನು ಕಸ್ಟಡಿಗೆ ನೀಡಬೇಕು ಎಂದು ಎಸ್ ಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು.
ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ಪವಿತ್ರ ಗೌಡ A1, ದರ್ಶನ್ A2 ಆರೋಪಿಗಳಾದರೆ, ದರ್ಶನ್ ಅತ್ತೆ ಪವಿತ್ರ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದಾನೆಂದು ಆರೋಪಿಸಿ ಆತನನ್ನು ಚಿತ್ರದುರ್ಗದಿಂದ ಅಪರಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಸೇರಿ ಇತರ ಸಹಚರೊಂದಿಗೆ ಹಲ್ಲೆ ನಡೆಸಿ ಕೊಂದಿದ್ದಾನೆಂಬ ಆಪಾದನೆ ಇದೆ. ರೇಣುಕಾ ಸ್ವಾಮಿಯನ್ನು ಜೂನ್ 9ರಂದು ಹತ್ಯೆ ಮಾಡಲಾಗಿತ್ತು.