ತೆಲಂಗಾಣದ : ಭೂಪಾಲ್ ನಲ್ಲಿ ಮಹಿಳಾ ಕಾನ್ಸ್ಟೇಬಲ್ ಗೆ ಗನ್ ತೋರಿಸಿ ಅತ್ಯಾಚಾರ ನಡೆಸಿರುವ ಅದೇ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರನ್ನು ರಕ್ಷಣೆ ಮಾಡುವ ಪೊಲೀಸರು ಈಗ ಅವರ ಮೇಲೆ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನ್ನು ಬಂಧಿಸಿ ಅವರನ್ನು ಕೆಲಸದಿಂದ ವಜಾ ಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಿಳಾ ಹೆಡ್ ಕಾನ್ಸ್ಟೇಬಲ್ ದೂರು ಆಧಾರದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಮೇಲಾಧಿಕಾರಿಗಳು ತಿಳಿಸಿದರು.
ಕಾಳೇಶ್ವರಂ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭವಾನಿ ಸೇನ್ ಎಂಬ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಏಕೃತ್ಯವನ್ನು ಮಾಡಿದ್ದಾನೆಂದು ಹೇಳಲಾಗಿದೆ ಆಕೆ ನೀಡಿದ ದೂರಿನ ನಲ್ಲಿ ಜೂನ್ 16ರಂದು ನೀರಾವರಿ ಯೋಜನೆಯ ವಸತಿ ಸೌಲಭ್ಯದ ಅತಿಥಿ ಕೊಟ್ಟಡಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ. ಎಸ್ ಐ ರಿವರ್ ತೋರಿಸಿ ಬೆದರಿಸಿ ತನ್ನ ಮೇಲೆ ಅತ್ಯಾಚಾರ ವ್ಯಸಗಿದ್ದಾನೆ ನಂತರ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ ಎಂದು ಹೆಡ್ ಕಾನ್ಸ್ಟೇಬಲ್ ಆರೋಪಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಭವಾನಿ ಸೇನ ವಿರುದ್ಧ ಆರೋಪ ಗಂಭೀರವಾಗಿ ಪರಿಗಣಿಸಿ ಪೋಲಿಸ್ ಮಹಾನ್ ನಿರ್ದೇಶಕ ಎವಿ ರಂಗನಾಥ್ ಭವಾನಿ ಸೇನವರನ್ನು ಸೇವೆಯಿಂದ ಶಾಶ್ವತವಾಗಿ ವಜಾಗೊಳಿಸಿದೆ ಮಹಿಳಾ ಹೆಡ್ ಕಾನ್ಸ್ಟೇಬಲ್ ದೂರಿನ ಆಧಾರದ ಮೇಲೆ ಎಸ್ಐ ವಿರುದ್ಧ ಐಪಿಸಿಯ ಸಂಬಂಧಿಸಿದಂತೆ ಸೆಕ್ಷನ್ಗಳನ್ನು ದಾಖಲಾಗಿದೆ.
ಈ ಹಿಂದೆ ಮೂವರು ಮಹಿಳಾ ವೇದಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಿಗಿದ್ದಾನೆ ಎಂಬ ಆರೋಪಗಳು ಕೇಳಿಬಂದಿದ್ದೆ. ಎಸ್ಐ ವಿರುದ್ಧ ಜುಲೈ 2022 ರಲ್ಲಿ ಅಸಿಫಾ ಬಾದ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಎಸ್ ಐ ಹೀಗೆ ಮಹಿಳಾ ಅಧಿಕಾರಿಗಳಿಗೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದಲ್ಲಿ ತೊಡಗಿರುವುದು ರಾಜ್ಯ ಪೊಲೀಸ್ ಇಲಾಖೆಗೆ ಧಕ್ಕೆ ತರುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.