ಹಾಸನ : ಇತ್ತೀಚಿಗೆ ಕ್ರೈಂಗಳ ಹಾವಳಿ ಹೆಚ್ಚಾಗುತ್ತಿದ್ದು ಅದೇ ರೀತಿ ಸರ್ಕಾರವು ಕಾನೂನು ಸುವ್ಯವಸ್ಥೆ ಇಲ್ಲದೇ ಇರುವುದರಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೇ ಹಾಸನದಲ್ಲಿ ಹಾಡಹಗಲೇ ನಡೆದ ಶೂಟೌಟ್‌ಗೆ ಇಬ್ಬರು ಯುವಕರು ಬಲಿಯಾಗಿದ್ದಾರೆ. ಹೊಯ್ಸಳ ನಗರದಲ್ಲಿ ಘಟನೆ ನಡೆದಿದ್ದು ಗುಂಡು ಹಾರಿಸಿ ಇಬ್ಬರು ಸಾವನಪ್ಪಿದ್ದಾರೆ. ಮಧ್ಯಾಹ್ನ12:30ರ ವೇಳೆಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಎಸ್‌ಪಿ ಮೊಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿದೆ.
ಹಾಸನದ ಶರಫತ್ ಅಲಿ, ಬೆಂಗಳೂರಿನ ಆಶಿಫ್ ಮೃತರಾಗಿದ್ದಾರೆ. ಸ್ಥಳಕ್ಕೆ ಶರಫತ್ ಅಲಿ ಪತ್ನಿ ಆಗಮಿಸಿದ್ದಾರೆ. ನಿವೇಶನ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆಯುತಿತ್ತು. ಈ ವಿಚಾರದ ಬಗ್ಗೆ ಇಂದು ಮಾತುಕತೆ ನಡೆಸಲು ಬಂದಾಗ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಹತ್ಯೆಯಲ್ಲಿ ಅಂತ್ಯವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಎಸ್‌ಪಿ ಮೊಹಮದ್ ಸುಜೇತಾ, ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿ ಮಾತನಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಒಬ್ಬರು ಶೂಟ್ ಮಾಡಿ, ಇನ್ನೊಬ್ಬರು ತಾನೇ ಶೂಟ್ ಮಾಡಿ ಹತ್ಯೆ ಮಾಡಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದು ಪ್ರಾಥಮಿಕ ಮಾಹಿತಿ. ಸದ್ಯಕ್ಕೆ ಕಾರಿನ ಒಳಗಡೆ ಒಂದು ವೆಪನ್ ಸಿಕ್ಕಿದೆ. ಮೃತರು ಯಾರು ಎನ್ನುವುದು ತಿಳಿದು ಬಂದಿಲ್ಲ ಎಂದು ಹೇಳಿದರು.
ಶರಫತ್ ಅಲಿಗೆ ಗುಂಡು ಹಾರಿಸಿ ನಂತರ ಕಾರಿನಲ್ಲೇ ಆಶಿಫ್ ಗುಂಡು ಹಾರಿಸಿ ಆತ್ಮಹತ್ಯೆ ಶರಣಾಗಿದ್ದಾರೆ. ಇಬ್ಬರ ಮೃತದೇಹಗಳನ್ನು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.