ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರತಿಯೊಂದು ಜಿಲ್ಲೆ ರಾಜ್ಯ ದೇಶಗಳಲ್ಲಿ ಆಚರಿಸಲು ಕಡ್ಡಾಯವಾಗಿದೆ ಈ ಯೋಗ ದಿನಾಚರಣೆಯ ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಸಹಾಯಕವಾಗುತ್ತದೆ.
ಗದಗ ಜಿಲ್ಲೆ , ಲಕ್ಷ್ಮೇಶ್ವರ ತಾಲ್ಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲ್ಲಾಪೂರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಊರಿನ ಪ್ರಮುಖ ಬೀದಿಗಳಲ್ಲಿ ಭಿತ್ತಿಫಲಕ,ಘೋಷಣೆಗಳೊಂದಿಗೆ ಜಾತಾ ಮಾಡಲಾಯಿತು.
ಪ್ರಧಾನ ಗುರುಗಳಾದ ಶಿವಪುತ್ರಪ್ಪ.ಮಲ್ಲಣ್ಣವರ ಮಾತನಾಡುತ್ತಾ ಯೋಗವನ್ನು ಪ್ರತಿದಿನ ಕ್ರಮಬದ್ದವಾಗಿ ಮಾಡಿದರೆ ರೋಗದಿಂದ ದೂರವಿರಬಹುದು. ಯೋಗ ನಮ್ಮ ಭಾರತೀಯ ಸಂಸ್ಕೃತಿಯ ಹೆಮ್ಮೆಯಾಗಿದೆ, ನಮ್ಮ ಪೂರ್ವಜರು ಪ್ರಾಚೀನ ಕಾಲದಲ್ಲೆ ಆರೋಗ್ಯದ ಕುರಿತು ಕಾಳಜಿಯನ್ನು ಹೊಂದಿದ್ದರು.
ವಿಶ್ವವೆ ಇಂದು ಯೋಗದ ಕಡೆ ಗಮನ ಹರಿಸಿದೆ. ಮಕ್ಕಳಾದ ನೀವು ಈಗಿನಿಂದಲೇ ಯೋಗವನ್ನು ಮಾಡಿ ದೈಹಿಕ ಆರೋಗ್ಯ , ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮಕ್ಕಳಿಗೆ ತಿಳಿಸಿದರು.
ಶಿಕ್ಷಕರಾದ ಶಂಕ್ರಯ್ಯ.ಸ್ಥಾವರಮಠ.ಮಹ್ಮದಲಿ.ಕಣಕೆ,ಶ್ರೀಶೈಲ .ಮಾಗಳದ,ಸುರೇಶ.ಹುಡೇದ,ಸಾಹಿರಾಬಾನು.ನಾಗರಕಟ್ಟಿ,ಸತೀಶ.ಸ್ವಾದಿ, ಮಂಜುನಾಥ.ಭೋವಿ. ಗಣೇಶ.ಲಮಾಣಿ ಇನ್ನು ಮಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.