ಬೆಂಗಳೂರು : ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಸಂಕಷ್ಟ ಎದುರಾಗಿದ್ದು ಇನ್ನು ಮುಗಿಯದಂತೆ ಕಾಣುತ್ತಿದೆ. ನೆನ್ನೆ ಕೋರ್ಟ್ ದರ್ಶನ್ ಅವರನ್ನು ಮತ್ತೆ ಆರು ದಿನ ಕಸ್ತಡಿಗೆ ನೀಡಲಾಯಿತು ಇದರ ಬೆನ್ನಲ್ಲೇ ದರ್ಶನ್ ಗೆ ಜಾಮೀನು ಸಿಗುವ ಲಕ್ಷಣಗಳು ಯಾವುದೋ ಸಿಗುತ್ತಿಲ್ಲ.
ಈ ಪ್ರಕರಣದಲ್ಲಿ ದರ್ಶನ್ ಪರವಾಗಿ ವಾದಿಸಲು ಅನುಭವಿ, ಹಿರಿಯ ವಕೀಲರನ್ನು ನೇಮಿಸಲಾಗಿದೆ. ಕೆಲ ವಾರಗಳ ಹಿಂದಷ್ಟೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಎಚ್ಡಿ ರೇವಣ್ಣ ಪರ ವಾದ ಮಂಡಿಸಿ ಅವರಿಗೆ ಜಾಮೀನು ಮಂಜೂರು ಮಾಡಿಸಿದ್ದ ಸಿವಿ ನಾಗೇಶ್ ಅವರು ಈಗ ದರ್ಶನ್ ಪರವಾಗಿ ವಾದ ಮಂಡಿಸಲಿದ್ದಾರೆ.
ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರುಗಳು ವಿಜಯಲಕ್ಷ್ಮಿ ದರ್ಶನ್ ಹಾಗೂ ಅವರ ತಂದೆ-ತಾಯಿಯ ಪರವಾಗಿ ದರ್ಶನ್ ಪರವಾಗಿ ನ್ಯಾಯಾಲಯದಲ್ಲಿ ಮಂಡಿಸುತ್ತಿದ್ದರು. ಇದೀಗ ಸಿವಿ ನಾಗೇಶ್ ಅವರು ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ಅವರ ಬದಲಿಗೆ ವಾದ ಮಂಡಿಸುತ್ತಾರೆಯೇ ಅಥವಾ ಅನಿಲ್ ಬಾಬು, ರಂಗನಾಥ ರೆಡ್ಡಿ ಅವರುಗಳ ಜೊತೆಗೆ ಸಿವಿ ನಾಗೇಶ್ ಸಹ ವಾದ ಮಂಡಿಸುತ್ತಾರೆಯೇ ಕಾದು ನೋಡಬೇಕಿದೆ.
ಒಬ್ಬ ಆರೋಪಿಯ ಪರವಾಗಿ ಇಬ್ಬರು ವಕೀಲರು ವಾದ ಮಂಡಿಸುವ ಅವಕಾಶವೂ ಇದೆ. ಅಥವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅನಿಲ್ ಬಾಬು ಹಾಗೂ ರಂಗನಾಥ ರೆಡ್ಡಿ ವಾದ ಮಂಡಿಸಿದರೆ, ದರ್ಶನ್ ಪರವಾಗಿ ಸಿವಿ ನಾಗೇಶ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಸಿವಿ ನಾಗೇಶ್ ಅವರು ಹೈಕೋರ್ಟ್ನ ಹಿರಿಯ ವಕೀಲರಾಗಿದ್ದು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರ ಅಪಹರಣ ಪ್ರಕರಣದಲ್ಲಿ ಎಚ್ಡಿ ರೇವಣ್ಣ ಜೈಲು ಪಾಲಾದಾಗಿದ್ದಾಗ ಅವರ ಪರ ವಾದ ಮಂಡಿಸಿ ಕೆಲವೇ ದಿನಗಳಲ್ಲಿ ಅವರಿಗೆ ಜಾಮೀನು ದೊರಕಿಸಿದರು. ಭವಾನಿ ರೇವಣ್ಣ ಜೈಲು ಪಾಲಾಗದಂತೆ ತಡೆಯುವಲ್ಲಿಯೂ ನಾಗೇಶ್ ಅವರ ಪಾತ್ರವಿದೆ ಎನ್ನಲಾಗುತ್ತಿದೆ. ಹಲ್ಲೆ ಆರೋಪದಲ್ಲಿ ಜೈಲುಪಾಲಾಗಿದ್ದ ಮೊಹಮ್ಮದ್ ನಲಪಾಡ್ ಪರವಾಗಿಯೂ ನಾಗೇಶ್ ಅವರೇ ವಾದ ಮಂಡಿಸಿದ್ದರು.