ದುನಿಯಾ ವಿಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದು ಏನಂದರೆ ದುನಿಯಾ ವಿಜಯ್ ನಟನೆಯ ಭೀಮ ಚಿತ್ರ ಬಿಡುಗಡೆ ಸಿದ್ಧವಾಗಿದೆ ಯಾವಾಗ ಎಂಬುದು ಚಿತ್ರ ನಿರ್ಮಾಪಕರು ದಿನಾಂಕವನ್ನು ಪ್ರಕಟಿಸಿದ್ದಾರೆ. ಭೀಮ ಚಿತ್ರವು ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕರು ಪ್ರಕಟಿಸಿದ್ದಾರೆ.
2021ರಲ್ಲಿ ‘ಸಲಗ’ ಸಿನಿಮಾ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತಿದೆ. ಅದೇ ರೀತಿಯ ರೌಡಿಸಂ ಕಥೆಯನ್ನು ಇಟ್ಟುಕೊಂಡು ಭೀಮ ಚಿತ್ರ ನಿರ್ದೇಶನ ಮಾಡಿದ್ದಾರೆ ವಿಜಯ್. ಇದೇ ಆಗಸ್ಟ್ 9ರಂದು ಸಿನಿಮಾ ರಿಲೀಸ್ ಆಗಲಿದೆ.
ಸಲಗ’ ಬಳಿಕ ಬಾಲಯ್ಯ ನಟನೆಯ ‘ವೀರ ಸಿಂಹ ರೆಡ್ಡಿ’ ಚಿತ್ರದಲ್ಲಿ ಖಡಕ್ ವಿಲನ್ ಆಗಿ ದುನಿಯಾ ವಿಜಯ್ ನಟಿಸಿದ್ದರು. ಸಲಗ ಆದ್ಮೇಲೆ ಸತತ ಮೂರು ವರ್ಷಗಳ ನಂತರ ಕನ್ನಡದ ಭೀಮ ಚಿತ್ರದ ವಿಜಯ್ ಮಾಸ್ ಎಂಟ್ರಿ ಕೊಡ್ತಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
‘ಭೀಮ’ ಚಿತ್ರದಲ್ಲಿ ಅಶ್ವಿನಿ ಅಂಬರೀಶ್, ಕಾಕ್ರೋಚ್ ಸುಧಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಈ ಚಿತ್ರಕ್ಕೆ ಇದೆ.