ಚಿತ್ರದುರ್ಗ : ವಿಶ್ವದಲ್ಲಿ ಇಂದು 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಅಮೃತ ಆಯುರ್ವೇದ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾಕ್ಟರ್ ಚಂದ್ರಕಾಂತ್ ನಾಗಸಮುದ್ರ, ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯದರ್ಶಿ ಭರತ್ ಎಲ್, ಡಾ. ನವೀನ್ ಬಸವರಾಜ್ ಸಜ್ಜನ್ ಅವರು ಮಾಡಿದರು.
ಕಾರ್ಯಕ್ರಮದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಪ್ರಶಾಂತ್ ಎಂ. ಎಸ್. ಪ್ರಾಂಶುಪಾಲರು ಅಮೃತ ಆಯುರ್ವೇದ ಕಾಲೇಜ್ ಅವರು ನಿರ್ವಹಿಸಿದ್ದರು. ಡಾ. ಗಂಗಾಧರ್ ವರ್ಮ ಅವರು ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆ 06 ಆಯುರ್ವೇದ ಕಾಲೇಜುಗಳು ಭಾಗವಹಿಸಿದ್ದವು. ಯೋಗ ಪ್ರಬಂಧ ಯೋಗ ನೃತ್ಯ ಯೋಗ ಭಾವಚಿತ್ರ ಹಾಗೂ ವೈಯಕ್ತಿಕ ಯೋಗ ಸ್ಪರ್ಧೆಗಳನ್ನು ನಡೆಸಲಾಯಿತು. 450 ಯೋಗ ಪಟುಗಳು ಭಾಗವಹಿಸಿದ್ದರು.