ಬೆಂಗಳೂರು : ರಾಜ್ಯಮಟ್ಟದ ಬೃಹತ್ ಭೋವಿ ಜನೋತ್ಸವ, ಗುರುಗಳ ಹುಟ್ಟು ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದ ಕುರಿತು ಜೂ. 20 ರಂದು ಗುರುವಾರ ಬೆಂಗಳೂರಿನ ಜಸ್ಮಾ ಭವನದಲ್ಲಿ ಪೂರ್ವ ಭಾವಿ ಸಭೆ ನಡೆಯಿತು.
ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆದ ಈ ಸಭೆಯಲ್ಲಿ ಸಮಾಜದ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು. ಜುಲೈ 18 ರಂದು ನಡೆಯು ಭೋವಿ ಜನೋತ್ಸವ ಕಾರ್ಯಕ್ರಮ ನಡೆಯುವ ಕುರಿತು ಸಲಹೆ ನೀಡಿದರು.
ಸಮಾಜದ ಸಂಘಟನೆಯ ದೃಷ್ಟಿಯಿಂದ ಭೋವಿ ಜನೋತ್ಸವವನ್ನು ಅದ್ದೂರಿಯಾಗಿ ನಡೆಸಬೇಕು, ನೂತನವಾಗಿ ಆಯ್ಕೆಗೊಂಡ ಸಂಸದರ, ನಿಗಮ ಮಂಡಳಿ ಅಧ್ಯಕ್ಷರ ಗೌರವ ಸಮರ್ಪಣೆ ಮತ್ತು ನೂತನವಾಗಿ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳಿಗೆ ಸನ್ಮಾನ ಸಮಾರಂಭದ ನಿಮಿತ್ಯ ಭೋವಿ ಜನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಅದಕ್ಕೆ ಸಮಾಜದ ಜನರನ್ನು ಸಮಗ್ರವಾಗಿ ತೊಡಗಿಸಿಕೊಳ್ಳಬೇಕೆಂದು ಸಭೆಯು ಸಲಹೆ ನೀಡಿತು.
ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಣರೂ ಹಾಗೂ ಶಿವಮೊಗ್ಗ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷರೂ ಆದ ಎಸ್. ರವಿಕುಮಾರ್ ಮಾತನಾಡಿ, ಇವತ್ತು ಇಲ್ಲಿ ಸಭೆ ಕರೆದಿರುವುದರ ಉದ್ದೇಶ ಇಷ್ಟೆ. ಸಮಾಜದ ಎಳಿಗೆಗೆ ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ. ಸಮಾಜದ ಸಂಘಟನೆ ಇಂದು ತುರ್ತಾಗಿದೆ. ಕಾರಣ ಇತ್ತೀಚೆಗಷ್ಟೇ ನಡೆದ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಎಲ್ಲಾ ಪಕ್ಷಗಳು ಸಮಾಜವನ್ನು ತುಂಬಾ ಕಡೆಗಣಿಸಿವೆ. ಹಾಗಾಗಿ ಸಮಾಜದ ಸಂಘಟನೆ ತುಂಬಾ ಅಗತ್ಯವಿದೆ.
ಶೇ.80 ರಷ್ಟು ಜನರು ಪಟ್ಟಣ ನೋಡಿಲ್ಲ. ಅವರನ್ನು ಸಕಲ ರೀತಿಯಲ್ಲೂ ಮುಖ್ಯವಾಹಿನಿಗೆ ತರವುದಕ್ಕಾಗಿ ನಾವು ಸಂಘಟಿತರಾಗಬೇಕಿದೆ . ಶಿಕ್ಣಣ ಇಲ್ಲದಿರವುದು ಕೂಡ ನಮ್ಮ ಸಮಾಜದ ಇನ್ನು ಹಿಂದುಳಿದಿರುವುದಕ್ಕೆ ಕಾರಣವಾಗಿದೆ. ಅದೆಲ್ಲ ಸರಿಯಾಗಬೇಕಾದರೆ ನಮ್ಮಕುಲಕಸುಬಿಗೆ ಆರ್ಥಿಕ ನೆರವು ಸಿಗಬೇಕಿದೆ.ಈನಿಟ್ಟಿನಲ್ಲಿ ನಾವು ಕೆಲಸಮಾಡಬೇಕಿದೆ ಎಂದರಲ್ಲದೆ, ಭೋವಿ ಜನೋತ್ಸವವನ್ನು ಎಲ್ಲಿ ನಡೆಸಬೇಕು ಎನ್ನುವುದನ್ನ ಸ್ವಾಮೀಜಿ ನಿರ್ಧಾರ ಮಾಡಿದರೆ ಅದನ್ನುಅದ್ದೂರಿಯಾಗಿ ನಡೆಸಲು ನಾವು ಸಿದ್ದರಿದ್ದೇವೆ.
ಸಚಿವರಾದ ಶಿವರಾಜ್ ತಂಗಡಗಿ ಅವರ ಸಮಾಜಪರ ಕಾಳಜಿಯನ್ನು ಮುಕ್ತ ಕಂಠದಿಂದ ಬಣ್ಷಿಸಿದ ಶ್ರೀಗಳು, ಸಮಾಜದ ಒಬ್ಬರು ಸಚಿವರಾಗಿದ್ದಕ್ಕೆ ಸಾಕಷ್ಟು ಅವಕಾಶಗಳು ಸಮಾಜಕ್ಕೆ ಸಿಕ್ಕಿವೆ. ಎಲ್ಲದಕ್ಕೂ ಸ್ಪಂದನೆ ಮಾಡುವ ಸಕರಾತ್ಮಕ ಮನೋಭಾವ ತಂಗಡಗಿ ಅವರದ್ದು. ಅದರಿಂದಲೇ ಸಾಕಷ್ಟು ಕೆಲಸಗಳಾಗಿವೆ.
ಅವರು ನಿಷ್ಟುರವಾಗಿ, ಗಟ್ಟಿಯಾಗಿ ನಿಲ್ಲುವ ಸ್ವಭಾವ. ಸರ್ಕಾರದಿಂದ ಎಲ್ಲವನ್ನು ಕೊಡಿಸುವ ಗುಣ ಅವರದು. ಸರ್ಕಾರದ ಮಟ್ಟದಲ್ಲಿ ಏನಾದರೂ ತೆಗೆದುಕೊಂಡರೆ ಅದನ್ನು ಅವರು ಈಡೇರಿಸುವದೇ ಬಿಡುವುದಿಲ್ಲ. ಇನ್ಮೊಂದಿಷ್ಟು ಬೇಡಿಕೆಗಳಿವೆ ಅವುಗಳನ್ನಿ ಅವರು ಮಾಡುತ್ತಾರೆ. ಹಾಗಂತ ಎಲ್ಲರ ಸಮಸ್ಯೆಗೆ ಸ್ಪಂದಿಸಲು ಆಗೋದಿಲ್ಲ.ಆದರೂ ಸಾಧ್ಯವಾದಷ್ಟು ಮಾಡ್ತಾರೆಂದು ಹೇಳಿದರು.
ಸಮಾಜದ ಮುಖಂಡರು ಹಾಗೂ ನಾಡಿನ ಹೆಸರಾಂತ ವಕೀಲರಾದ ಶಂಕರಪ್ಪ ಮಾತನಾಡಿ, ಭೋವಿ ಸಮಾಜಕ್ಕೆ ಮೀಸಲಾತಿ ತಪ್ಪಿಸಲು ನಡೆದ ಕಾನೂನು ಹೋರಾಟ ಮತ್ತು ಭೋವಿ ಅವರಿಗೆ ಮೀಸಲು ನೀಡಬರದೆಂದುನಡೆದ ಪಿತೂರಿಯನ್ನು ಸಭೆಯಲ್ಲಿ ವಿವರಿಸಿದರಲ್ಲದೆ, ಇಂತಹ ಪಿತೂರಿಗಳಿಗೆ ಈಗ ಕಾನೂನಿನಲ್ಲಿಯೇ ಹಿನ್ನಡೆಯಾಗಿದೆ. ಅದೃಷ್ಟಾವಶಾತ್ ನಾವೀಗ ನೆಮ್ಮದಿಯಿಂದ ಇರಬೇಕಿದೆಯಾದರೂ ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂದು ಸಲಹೆ ನೀಡಿದರು.
ಬೇರೆ ಬೇರೆ ಸಣ್ಣ ಪುಟ್ಟ ಸಮಾಜದ ನಾಯಕರಿಗೆ ರಾಜಕೀಯ ಅವಕಾಶಗಳು ಸಿಗುತ್ತಿವೆ. ಆದರೆ ದೊಡ್ಡ ಸಂಖ್ಯೆಯಲ್ಲಿರುವ ಭೋವಿ ಸಮಾಜಕ್ಕೆ ಸಿಗುತ್ತಿಲ್ಲ ಎಂದರಲ್ಲದೆ, ಜನೋತ್ಸವಕ್ಕೆ ಗುಲ್ಬರ್ಗಾ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ಬರುತ್ತೇವೆ ಎಂದರು.
ಹಾವೇರಿ ಜಿಲ್ಲಾಧ್ಯಕರಾದ ರವಿಪೂಜಾರ್ ಮಾತನಾಡಿ, ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿನಡೆಯಲಿ. ಒಂದು ಕಾರ್ಯಕ್ರಮ ಮಾಡೋದು ಮುಖ್ಯವಲ್ಲ, ಈ ಕಾರ್ಯಕ್ರಮವು ನಮ್ಮಸಮಾಜದ ಬೇಡಿಕೆಗಳ ಮೇಲೆಬೆಳಕು ಚೆಲ್ಲುವಂತಾಗಲಿ.ಹಾಗಾದಾಗ ಮಾತ್ರ ನಮ್ಮ ಕಾರ್ಯ ಕ್ರಮಗಳುಶಕ್ತಿಯುತವಾಗುತ್ತವೆ.