ದೆಹಲಿ : ವಿವಿಧ ಕೃಷಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೃಷಿ ತಜ್ಞರು ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಎರಡೂವರೆ ಗಂಟೆ ಕಾಲ ನಡೆದ ಚರ್ಚೆಯಲ್ಲಿ ಐಸಿಎಫ್ಎ, ಭಾರತ್ ಕೃಷಿಕ್ ಸಮಾಜ್, ಸಿಎಸಿಪಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕನಾಮಿಕ್ಸ್ ಅಂಡ್ ಪಾಲಿಸಿ ರೀಸರ್ಚ್, ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಶನ್ ಆಫ್ ಸದರ್ನ್ ಇಂಡಿಯಾ ಮೊದಲಾದ ಸಂಘ ಸಂಸ್ಥೆಗಳು ಈ ನಿಯೋಗದಲ್ಲಿದ್ದವು.
ಕೃಷಿ ಕ್ಷೇತ್ರದ ಬೇಡಿಕೆಗಳು
- ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಮೊತ್ತದ ಹೂಡಿಕೆ ಬೇಕು.
- ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ನ (ಐಸಿಎಆರ್) ಬಜೆಟ್ ಅನ್ನು 9,500 ಕೋಟಿ ರೂನಿಂದ 20,000 ಕೋಟಿ ರೂಗೆ ಹೆಚ್ಚಿಸಬೇಕು.
- ಎಲ್ಲಾ ಕೃಷಿ ಸಂಬಂಧಿತ ಸಬ್ಸಿಡಿಗಳನ್ನು ಏಕೀಕೃತಗೊಳಿಸಿ ಹಣವನ್ನು ನೇರವಾಗಿ ವರ್ಗಾವಣೆ ಮಾಡಬೇಕು.
- 2018ರಿಂದಲೂ ಹೆಚ್ಚಾಗದ ಯೂರಿಯಾ ಬೆಲೆಯನ್ನು ಈಗ ಏರಿಕೆ ಮಾಡಬೇಕು.
- ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಕೊಟ್ಟು ಉತ್ತೇಜನ ನೀಡಬೇಕು.
- ಎಂಎಸ್ಪಿ ಕಮಿಟಿಯನ್ನು ಸಮಾಪ್ತಿಗೊಳಿಸಿ; ಹೊಸ ಕೃಷಿ ನೀತಿ ಜಾರಿಗೆ ತನ್ನಿ
- ಕೇಂದ್ರ ಪ್ರಾಯೋಜಿತ ಕೃಷಿ ಯೋಜನೆಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಅನುಪಾತವನ್ನು ಈಗಿರುವ 60:30ರಿಂದ 90:10ಕ್ಕೆ ಬದಲಿಸಬೇಕು. ಐದು ವರ್ಷ ಅವಧಿಯವರೆಗೆ ಶೇ. 90ರಷ್ಟು ವೆಚ್ಚವನ್ನು ಸರ್ಕಾರ ಭರಿಸಬೇಕು.
- ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಪಿಇಡಿಎ) ಹಿಂದಿನ ಬಜೆಟ್ನಲ್ಲಿ 80 ಕೋಟಿ ರೂ ನೀಡಲಾಗಿತ್ತು. ಅದನ್ನು 800 ಕೋಟಿ ರೂಗೆ ಹೆಚ್ಚಿಸಬೇಕು. ಇದರಿಂದ ಕೃಷಿ ರಫ್ತು ಹೆಚ್ಚಲು ಸಾಧ್ಯವಾಗುತ್ತದೆ.
- ರಾಷ್ಟ್ರೀಯ ಆಡು ಮತ್ತು ಕುರಿ ಯೋಜನೆ ಆರಂಭಿಸಬೇಕು.
- ಜಿಲ್ಲಾ ರಫ್ತು ಕೇಂದ್ರಗಳನ್ನು ಸ್ಥಾಪಿಸಬೇಕು.
ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳು ಅಂತಿಮವಾಗಿ ಯಾವೆಲ್ಲಾ ಅಂಶಗಳನ್ನು ಬಜೆಟ್ನಲ್ಲಿ ಅಡಕಗೊಳಿಸುತ್ತಾರೆ ಕಾದು ನೋಡಬೇಕು. ಜುಲೈ 22ಕ್ಕೆ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆ ಆಗುವ ಸಾಧ್ಯತೆ ಇದೆ.