ಹಾರೂಗೇರಿ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪಟ್ಟಣದ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆ ಎಸ್ ಬಿ ದರೂರ ಸಿ ಬಿ ಎಸ್ ಇ ಸೆಂಟ್ರಲ್ ಸ್ಕೂಲ್ ನಲ್ಲಿ ಯೋಗ ಹಾಗೂ ಪ್ರಾಣಾಯಾಮ ಜರುಗಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ದತ್ತಾತ್ರೇಯ ಮುನಸೇ ಮಾತನಾಡಿ,ಯೋಗದಿಂದ ರೋಗ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ. ಭಾರತೀಯರ ಯೋಗದ ಪ್ರಾಮುಖ್ಯತೆ ಇಂದು ವಿದೇಶಗಳಲ್ಲಿಯೂ ಧ್ವನಿ ಎತ್ತಿದೆ. ಹಾಗಾಗಿ ಯೋಗ ಮಾಡಿ ನಿರೋಗಿಯಾಗಿ ಎಂದರು. ಇದೇ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.