Breaking
Tue. Dec 24th, 2024

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಹತ್ತು ದಿನಗಳ ಯೋಗ ತರಬೇತಿ ಕಾರ್ಯಾಗಾರ….!

ಚಿತ್ರದುರ್ಗ : ಧ್ಯಾನಾಸಕ್ತ ಚಟುವಟಿಕೆಗಳು ಮನಸ್ಸಿಗೆ ಏಕಾಗ್ರತೆ, ನೆಮ್ಮದಿ, ಶಾಂತಿಯನ್ನು ನೀಡಿತು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಮಹಾದೇವಿ.ಎಂ. ಮರಕಟ್ಟಿ ನಡೆಸಿದ.

ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಹತ್ತು ದಿನಗಳ ಯೋಗ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಲ್ಕುಗಳ ಬಂಧನದಿಂದ ಬೇಸತ್ತು ಕಾಲನೂಕುತ್ತಿರುವ ಖೈದಿ ಬಂಧುಗಳಿಗೆ ಗುಣಮಟ್ಟದ ಕೌಶಲ್ಯಧಾರಿತ ಉತ್ತಮ ಜೀವನಮೌಲ್ಯ ಬಿತ್ತುವ ಸರಳ ಆಸನಗಳ ಅಭ್ಯಾಸಗಳು ಮನಸ್ಸಿನ ದೃಢತೆಯನ್ನು ಗಟ್ಟಿಗೊಳಿಸುತ್ತವೆ. ಈ ಸಂದರ್ಭದಲ್ಲಿ ಪಡೆದ ಯೋಗ ತರಬೇತಿಯನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆಯುತ್ತಾರೆ.

ಸಹಾಯಕ ಜೈಲರ್ ರಾಮಣ್ಣ ಹೇರ್‌ಕಲ್, ಶಿಕ್ಷಕ ಶ್ರೀರಾಮರೆಡ್ಡಿ ಹಾಗೂ ಪೂರಕ ಕಾರಾಗೃಹದ ಸಿಬ್ಬಂದಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಾಗೂ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಮುರುಳಿ ನಿರ್ದೇಶನದಲ್ಲಿ ನೂರಕ್ಕೂ ಹೆಚ್ಚು ಖೈದಿ ಬಾಂಧವರು ಯೋಗಾಸನದ ಮಹತ್ವವನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು.

Related Post

Leave a Reply

Your email address will not be published. Required fields are marked *