Breaking
Tue. Dec 24th, 2024

ಬಿ.ಸಿ.ಶಿವಣ್ಣ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷೆ ಡಾ.ಬಿ.ಎಸ್.ತ್ರಿವೇಣಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಐವತ್ತು ಸಾವಿರ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಕಾರ್ಯಕ್ರಮ….!

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿ.ಶಿವಣ್ಣ ಫೌಂಡೇಶನ್ ಟ್ರಸ್ಟ್ ಬೆಂಗಳೂರು ವತಿಯಿಂದ ಹಮ್ಮಿಕೊಂಡಿರುವ ಜಿಲ್ಲೆಯಲ್ಲಿ ಐವತ್ತು ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನು ಚಂದ್ರವಳ್ಳಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ಬೇರೆ ಬೇರೆ ಕಾರಣಗಳಿಂದ ಗಿಡ-ಮರ, ಅರಣ್ಯ ನಾಶವಾಗುತ್ತಿದೆ.

ಗಿಡಗಳನ್ನು ನೆಟ್ಟು ಪೋಷಿಸುವುದು ಕೇವಲ ಅರಣ್ಯ ಇಲಾಖೆ ಕೆಲಸವೆಂದು ಭಾವಿಸುವುದು ತಪ್ಪು. ಪ್ರತಿಯೊಬ್ಬರ ಮೇಲೆ ಜವಾಬ್ದಾರಿಯಿದೆ. ಜಿಲ್ಲೆಯಲ್ಲಿ 84 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಮಳೆಗಾಲದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿದಾಗ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಕೊಡುಗೆಯಾಗಿ ನೀಡಬಹುದು.

ಅತ್ಯಧಿಕ ಬಿಸಿಲಿನ ತಾಪಮಾನವೂ ಕೂಡ ಪರಿಸರ ನಾಶಕ್ಕೆ ಕಾರಣ. ಗಾಳಿ, ನೀರು, ಆಹಾರ ಎಲ್ಲವೂ ಕಲುಷಿತವಾಗುತ್ತಿದೆ. ಸರ್ಕಾರದಿಂದ ಕಳೆದ ವರ್ಷ 7.50 ಲಕ್ಷ ಸಸಿ ಬೆಳೆಸಿದ್ದೇವೆ. ಈ ವರ್ಷ ಸುಮಾರು 17 ಲಕ್ಷ ಸಸಿಗಳನ್ನು ಬೆಳೆದಿದೆ.

ಬಿ.ಸಿ.ಶಿವಣ್ಣ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎಸ್.ತ್ರಿವೇಣಿ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಐವತ್ತು ಸಾವಿರ ಗಿಡಗಳನ್ನು ನೆಟ್ಟು ಪರಿಸರ ಉಳಿಸಬೇಕಾಗಿದೆ. ಈ ಗಿಡ ಚಂದ್ರವಳ್ಳಿಯಿಂದ ಗಿಡ ನೆಡುವ ಕಾರ್ಯಕ್ರಮ ಕೈಗೆತ್ತಿಕೊಂಡಿದೆ. ಗಿಡ-ಮರ ನಾಶವಾಗುತ್ತ ಪರಿಸರದಲ್ಲಿ ಏರುಪೇರಾಗಿ ಸಕಲ ಜೀವರಾಶಿಗಳು ತತ್ತರಿಸಿವೆ. ಪ್ರತಿಯೊಬ್ಬರಿಗೂ ಒಂದೊಂದು ಗಿಡ-ನೆಟ್ಟು ಪೋಷಿಸಬೇಕು ಎಂದು ಹೇಳಿದರು. 

ಪೌರಾಯುಕ್ತೆ ರೇಣುಕೆ ಮಾತನಾಡುತ್ತ ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ ಜೋಪಾನ ಮಾಡುವುದು ಅಷ್ಟೆ ಮುಖ್ಯ. ಚಿಕ್ಕ ಮಕ್ಕಳಿಂದ ಗಿಡಗಳನ್ನು ಹಾಕಬೇಕು. ಮುಂದೆ ಅದು ಬೆಳೆದು ದೊಡ್ಡ ಮರವಾದಾಗ ಅವರಿಗೆ ಖುಷಿ ಕೊಡುವುದರ ಜೊತೆಗೆ ನಾನು ನೆಟ್ಟ ಗಿಡ ದೊಡ್ಡದಾಗಿದೆ ಎಂದು ಮತ್ತೊಬ್ಬರಿಗೆ ತೋರಿಸಬಹುದು. ಪರಿಸರದಲ್ಲಿ ಹಸಿರು ನೋಡಿದರೆ ಕಣ್ಣಿಗೆ ಮನಸ್ಸಿಗೆ ತಂಪಾಗಿಸುತ್ತದೆ. ನಗರದಲ್ಲಿ ಎಲ್ಲೆಲ್ಲಿ ಖಾಲಿ ಜಾಗವಿದೆಯೋ ಅಲ್ಲೆಲ್ಲಾ ಗಿಡಗಳನ್ನು ನೀಡಿ ನನ್ನ ಸಂಪೂರ್ಣ ಸಹಕಾರವಿದೆ ಎಂದು ಭರವಸೆ ನೀಡಿದ್ದಾರೆ.

ಇಂಜಿನಿಯರ್ ಪಿ.ಎಲ್.ಸುರೇಶ್ರಾಜು ಮಾತನಾಡಿ ಬಳಸುವವರನ್ನು ಮರೆಯುವುದು ಸಹಜ. ಆದರೆ ಬೆಳೆಸುವವರನ್ನು ಯಾರು ಮರೆಯುವುದಿಲ್ಲ. ಮಕ್ಕಳಿಂದ ಬೀಜದ ಉಂಡೆಗಳನ್ನು ತಯಾರಿಸಿ ಎಲ್ಲಾ ಕಡೆ ಪಸರಿಸುವ ಕೆಲಸವಾಗಬೇಕು. ಮಕ್ಕಳು ಚಿಕ್ಕಂದಿನಲ್ಲಿಯೇ ಗಿಡ ನೆಟ್ಟು ಮುಂದಿನ ಪೀಳಿಗೆಗೆ ಪರಿಸರ ನೀಡಲಿ ಎಂದು ಹಾರೈಸಿದರು.

ನ್ಯಾಯವಾದಿ ಕೆ.ಎಸ್.ವಿಜಯ ಮಾತನಾಡುತ್ತ ಸಾಲು ಮರದ ತಿಮ್ಮಕ್ಕ ಯಾವುದೇ ಪ್ರಶಸ್ತಿಯ ಆಸೆಗಾಗಿ ಗಿಡ-ಮರಗಳನ್ನು ಬೆಳೆಸಲಿಲ್ಲ. ಬಿ.ಸಿ.ಶಿವಣ್ಣನವರು ಆದರ್ಶ ವ್ಯಕ್ತಿಯಾಗಿ ಬದುಕಿದವರು. ಅವರ ಆಸೆಯಂತೆ ಗಿಡ ನೆಟ್ಟು ದೊಡ್ಡ ಮರವನ್ನಾಗಿ ಬೆಳೆಸಬೇಕಿದೆ. ಬುದ್ದ, ಬಸವ, ಅಂಬೇಡ್ಕರ್ ಆದರ್ಶ ತತ್ವಗಳು ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕೆಂದರು.

ಬಿ.ಶಿವಣ್ಣ ಫೌಂಡೇಶನ್ ಟ್ರಸ್ಟ್‌ನ ಬಿ.ಎಸ್.ಹೇಮಲತ, ನ್ಯಾಯವಾದಿ ಬಿ.ಎಸ್.ನಾಗರಾಜು, ಟಿ.ಪಾಂಡ್ಯಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್‌ಗೊಪ್ಪೆ ವೇದಿಕೆಯಲ್ಲಿದ್ದರು.

ಹತ್ತನೆ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಹಿರಿಯೂರಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Related Post

Leave a Reply

Your email address will not be published. Required fields are marked *