ಯುವಕ-ಯುವತಿಯರಂತು ತಮ್ಮ ಫಾಲೋವರ್ಗಳನ್ನು ಹೆಚ್ಚಿಸಿಕೊಳ್ಳಲು, ಹೆಚ್ಚು ವೀವ್ಸ್ ಮತ್ತು ಲೈಕ್ಸ್ ಪಡೆಯಲು ಜೀವಕ್ಕೆ ಅಪಾಯವಾಗುವಂತಹ ಸ್ಟಂಟ್ಗಳನ್ನು ಬಳಸುತ್ತಿದ್ದಾರೆ. ಇದರಲ್ಲಿ ಯಾವುದಾದರೂ ಘಟನೆಯನ್ನು ನಾವು ನೋಡಿದ್ದೇವೆ. ಇಷ್ಟಾದರೂ ಯುವಜನತೆಗೆ ರೀಲ್ಸ್ ಹುಚ್ಚು ಬಿಟ್ಟಿಲ್ಲ.
ಪುಣೆಯಲ್ಲಿ ಯುವತಿಯೊಬ್ಬಳು, ಹುಡುಗನೊಬ್ಬನ ಕೈ ಹಿಡಿದುಕೊಂಡು ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡುತ್ತಿರುವ ರೀತಿ ರೀಲ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಇದೀಗ ಹೈದರಾಬಾದ್‌ನಲ್ಲಿ ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಚಲಿಸುತ್ತಿದ್ದ ಬಸ್ ಕೆಳಗೆ ಹಠಾತ್ತನೆ ಮಲಗುವ ಸಾಹಸ ರೀಲ್ಸ್ ಮಾಡಿದ್ದಾನೆ. ಈ ಕುರಿತ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ವಾಹನಗಳು ಸಂಚರಿಸುವ ಸಮಯದಲ್ಲಿ ಯುವಕನೊಬ್ಬ ದಿಢೀರನೆ ರಸ್ತೆ ಮಧ್ಯಕ್ಕೆ ಬಂದು ನಿಂತಿದ್ದಾನೆ. ನಂತರದ ಹೆಜ್ಜೆ ಮುಂದಕ್ಕೆ ಸಾಗಿ ಚಲಿಸುತ್ತಿದ್ದ ಬಸ್ ಕೆಳಗೆ ಮಲಗಿದ್ದಾನೆ. ಬಸ್ ಸಹ ತಕ್ಷಣಕ್ಕೆ ನಿಲ್ಲಿಸಲಾಗದೆ ಮುಂದೆ ಸಾಗಿದೆ. ಏನೋ ಅನಾಹುತ ಸಂಭವಿಸಿತೇನೋ ಎನ್ನುವಷ್ಟರಲ್ಲಿ ಯುವಕ ಎದ್ದು ರಸ್ತೆ ಪಕ್ಕಕ್ಕೆ ತೆರಳಿದ್ದಾರೆ. ಬಿಡ್ ಕಟ್ಟಿ ರೀಲ್ಸ್‌ಗಾಗಿ ಯುವಕನೊಬ್ಬ ಇಂತಹ ಕೆಲಸ ಮಾಡಿದ್ದಾನೆ.
ಆನೇರಿ ಶಾ ಯಕ್ಕತಿ ಎಂಬ ಎಕ್ಸ್’ ಖಾತೆಯಲ್ಲಿ ಜೂನ್ 21 ರಂದು ವೀಡಿಯೋ ಹಂಚಿಕೊಂಡಿದೆ, 78 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಯುವಜನ ಹುಚ್ಚಾಟಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದು ಎಡಿಟ್ ಮಾಡಿದ ವೀಡಿಯೋ, ನಕಲಿ ವೀಡಿಯೋ ಎಂದು ಹೇಳಲಾಗಿದೆ, ಇನ್ನೂ ಕೆಲವು ಪಾಪ ಆ ಬಸ್ ಡ್ರೈವರ್‌ಗೆ ಹಾರ್ಟ್ ಅಟ್ಯಾಕ್ ಆಗಿರುತ್ತದೆ, ಇಂಥವನನ್ನ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿ ಎಂದು ಕಿಡಿ ಕಾರಿದ್ದಾರೆ.