ಬೆಂಗಳೂರು : ಡಿ ಗ್ಯಾಂಗ್ ಎರಡು ದಿನಗಳ ಮಟ್ಟಿಗೆ ಪೊಲೀಸ್ ಕಸ್ಟರ್ಡಿ ಒಪ್ಪಿಸಲಾಯಿತು, ಆದರೆ ಅವರು ಕಷ್ಟಪಟ್ಟು ಅಂತ್ಯಗೊಂಡಿದ್ದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳನ್ನು ಕೋರ್ಟಿನ ನ್ಯಾಯಾಧೀಶರು ದರ್ಶನ್ ಗ್ಯಾಂಗ್ ಅವರನ್ನು ಮತ್ತೆ ಪರಪ್ಪನಹಾರಕ್ಕೆ ಕಳಿಸಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೊತೆ ಇದ್ದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೇರಿದ್ದಾರೆ. ದರ್ಶನ್ ಸೇರಿ ನಾಲ್ವರಿಗೆ 13 ದಿನ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಧಿಸಿದೆ. ಈ ನಡುವೆ ರಿಮ್ಯಾಂಡ್ ಕಾಪಿಯಲ್ಲಿ ಸ್ಫೋಟಕ ಅಂಶ ಬಯಲಾಗಿದೆ.
ಆನ್‌ಲೈನ್‌ನಲ್ಲಿ ಇಟಿಕ್ ಶಾಕ್ ಟಾರ್ಚ್ ಖರೀದಿ ಮಾಡಿರುವುದು ಬಯಲಾಗಿದೆ. ಆರೋಪಿ ಧನ್ ಆನ್ ಲೈನ್ ಬುಕ್ ಮಾಡಿಕೊಂಡು ಇಟ್ಲಿಕ್ ಟಾರ್ಚ್ ತರಿಸಿಕೊಂಡಿದ್ದಾನೆ. ಈ ಬಗ್ಗೆ ಸಾಕ್ಷಿದಾರನ ಬಳಿ 164 ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಎಲ್ಲಾ ಆರೋಪಿಗಳು ವೆಬ್ ಆಯಪ್ ಬಳಕೆಯನ್ನು ಮಾಡಿದ್ದಾರೆ. ವೆಬ್ ಆಯಪ್ ಮೂಲಕ ಆರೋಪಿತರು ಮಾತನಾಡಿದ್ದಾರೆ. ಬಳಿಕ ಎಲ್ಲಾ ಆರೋಪಿಗಳು ಸಿಮ್ ಬಿಸಾಡಿ ಹೊಸ ಸಿಮ್ ಖರೀದಿ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಕೊಲೆಯಾದ ರೇಣುಕಾಸ್ವಾಮಿ ಮೊಬೈಲ್ ಫೋನ್ ಸುಮ್ಮನಹಳ್ಳಿ ಮೋರಿಯಲ್ಲಿ ಎಸೆದಿದ್ದಾರೆ.
ಆದ್ದರಿಂದ ರೇಣುಕಾ ಸ್ವಾಮಿಯ ಮೊಬೈಲ್ ನಲ್ಲಿ ಡಾಟಾ ನಿಷ್ಕ್ರಿಯಗೊಂಡಿದೆ. ಈ ನಿಷ್ಕ್ರಿಯಗೊಂಡಿರೋ ಡಾಟಾ ಮರಳಿ ಪಡೆಯಲು ಮೃತನ ಹೆಸರಲ್ಲಿ ಹೊಸ ಸಿಮ್ ಕಾರ್ಡ್ ಪಡೆಯಲಾಗಿದೆ. ಸಂಬಂಧಪಟ್ಟ ಕಂಪನಿಯ ಸಿಮ್ ಕಾರ್ಡ್ ಪಡೆದು ಡಾಟಾ ರಿಟ್ರೀವ್‌ಗೆ ಕಳಿಸಲಾಗಿದೆ.
ರೇಣುಕಾಸ್ವಾಮಿಯ ಬಟ್ಟೆ ಕೂಡ ಬದಲಾಯಿಸಿದ್ದಾರೆ. ಈ ನಡುವೆ ಸಾಕ್ಷಿದಾರರಿಗೆ ಎ2 ದರ್ಶನ್ ಸಹಚರರು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಜೈಲಿನಲ್ಲಿರೋ ದರ್ಶನ್ ಅಭಿಮಾನಿಗಳಿಂದ ಹಲ್ಲೆ ಮಾಡುವ ಸಾಧ್ಯತೆ ಇರುವಂತೆ ಆತನಿಗೆ ತುಮಕೂರು ಜೈಲಿಗೆ ಶಿಫ್ಟ್ ಮನವಿ ಮಾಡಿಕೊಳ್ಳಲಾಗಿದೆ.
ನಟ ದರ್ಶನ್ ವಿರುದ್ಧ 2011 ರಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 498ಎ, 323, 355 506ಬಿ, 27 ಆರ್ಮ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.