Breaking
Mon. Dec 23rd, 2024

ಕೆ.ಎನ್ಎನ್. ಡಿಜಿಟಲ್ ಡಿಸ್ಕ್ : ನರೇಂದ್ರ ಮೋದಿಯವರು ಭಾರತದ ದಲ್ಲಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಹೊಸ ಅಧ್ಯಾಯಕ್ಕೆ ನಾಂದಿಯಾಗಿದ್ದಾರೆ.

ಅದೇ ರೀತಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಸಂಬಂಧವನ್ನು ಹೆಚ್ಚಿಸಲು ಹಾಗೂ ಸರಕು ಸೇವೆಗಳಿಗೆ ಅನುಕೂಲಕ್ಕಾಗಿ ಭಾರತದ ರಾಚಾಹಿ ಮತ್ತು ಕೊಲ್ಕತ್ತಾ ನಡುವಿನ ಹೊಸ ರೈಲು ಸೇವೆ ಮತ್ತು ಚಿತ್ಗಾವ್ ಹಾಗೂ ಕೊಲ್ಕತ್ತಾ ನಡುವಿನ ಹೊಸ ಬಸ್ ಸೇವೆಯನ್ನು ಘೋಷಿಸಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರು ಇದಕ್ಕೆ ಒಮ್ಮತವನ್ನು ಸೂಚಿಸಿದ್ದು ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರ ನಡುವೆ ನವದೆಹಲಿಯಲ್ಲಿ ಶನಿವಾರ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಒಮ್ಮತವನ್ನು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯಿಂದ ಬಾಂಗ್ಲಾದೇಶ ಮತ್ತು ಭಾರತಕ್ಕೆ ಅನುಕೂಲಕರವಾಗಿದೆ ಎಲ್ಲ ರಂಗಗಳಲ್ಲಿ ಸಂಪರ್ಕವನ್ನು ಸಾಧಿಸಲು ಮತ್ತು ವಿಸ್ತಾರ ಗೊಳಿಸಲು ಸಾರಿಗೆ ವ್ಯವಸ್ಥೆಯು ಸಹಾಯಕವಾಗಿದೆ ಉಭಯ ನೆರವರೆ ಯೋಜನೆಯನ್ನು ವಿಸ್ತರಿಸಲು ಮತ್ತು ಬಾಂಗ್ಲಾದೇಶದ ವಧಿಕೀಯ ರೋಗಿಗಳಿಗೆ ಈಶ ಮತ್ತು ರಂಗ್ಪುರದಲ್ಲಿ ಭಾರತದ ಹೊಸ ಸಹಾಯಕ ಹೈ ಕಮಿಷನ್ ತೆರೆಯುವುದಾಗಿ ಮೋದಿ ಘೋಷಿಸಿದ್ದಾರೆ.

ಈ ಹಿಂದೆ ಭಾರತ ಪಾಕಿಸ್ತಾನ ಯುದ್ಧದಿಂದಾಗಿ ಸ್ಥಗಿತಗೊಂಡಿದ್ದ 1965 ಕ್ಕಿಂತ ಇಂದಿನ ರೈಲ್ವೆ ಸಂಪರ್ಕಗಳನ್ನು ಪುನರ್ ಸ್ಥಾಪಿಸಲು ಮತ್ತು ಎಲ್ಲ ರಂಗಗಳಲ್ಲಿ ಸಂಪರ್ಕವನ್ನು ವಿಸ್ತಾರಗೊಳಿಸಲು ಇದು ಸಹಾಯಕವಾದ ಯೋಜನೆಯಾಗಿದೆ ಎಂದು ತಿಳಿಸಿದರು.

Related Post

Leave a Reply

Your email address will not be published. Required fields are marked *