ಮೈಸೂರು : ರಾಜ್ಯದಲ್ಲಿ ದಿನ ದಿನ ಅಪಘಾತಗಳು ಹೆಚ್ಚಾಗುತ್ತಿವೆ ಅದರ ಬೆನ್ನಲ್ಲೇ ಈ ಘಟನೆಯೂ ನಡೆದಿದೆ. ಹುಣಸೂರು ತಾಲೂಕಿನ ಕೊಳಘಟ್ಟ ಗ್ರಾಮದ ಬಳಿ ಸರಣಿ ಅಪಘಾತ ಸಂಭವಿಸಿದ್ದು, 6 ಕಾರುಗಳು ಜಖಂ ಆಗಿವೆ. ಒಂದರ ಹಿಂದೆ ಒಂದರಂತೆ ಬಂದ ಆರು ಕಾರುಗಳು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮುಂದೆ ಇದ್ದ ಕಾರು ಚಾಲಕನೊಬ್ಬ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಬರುತ್ತಿದ್ದ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಜಖಂ ಆಗಿದೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣಾ ಪ್ರಕರಣ ದಾಖಲಿಸಲಾಗಿದೆ.