ಚಿತ್ರದುರ್ಗ : ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ದ್ವಾರಕಾ ಬಡಾವಣೆಯ ಗಣಪತಿ ದೇವಸ್ಥಾನ ಮುಂಭಾಗದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಯೋಗ ಕಾರ್ಯಕ್ರಮವನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಅಭ್ಯಾಸವನ್ನು ಮಾಡಿಸುತ್ತಾ ಅವರಿಗೆ ಮುಂದೆ ಯಾವುದೇ ರೀತಿಯ ರೋಗಗಳು ಬಾರದಂತೆ ಜಾಗೃಕತೆ ವಹಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂಕೆ ತಾಜ್ ಪೀರ್ ರವರು ಮಕ್ಕಳಿಗೆ ಜ್ಞಾನವನ್ನು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಮಲ್ನಾಡಿಯ ರಾಘವೇಂದ್ರ ಶ್ರೀಗಳು ಆಗಮಿಸಿ ಅವರು ಯೋಗದ ಬಗ್ಗೆ ಇಲ್ಲಿನ ಮಕ್ಕಳಿಗೆ ಜ್ಞಾನವನ್ನು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಗ್ರಾಮಗಳಲ್ಲಿ ಯೋಗವನ್ನು ಪರಿಚಯ ಮಾಡಿದ ಕೀರ್ತಿ ಶ್ರೀಗಳಿಗೆ ಅದರಲ್ಲೂ ನಮ್ಮ ತಾತನವರನ್ನು ಸಹ ಒಬ್ಬರಾಗಿದ್ದಾರೆ ಎಂದು ಹೇಳಿದರು.
ಯೋಗವನ್ನು ದಿನನಿತ್ಯ ಅಭ್ಯಾಸ ಮಾಡಿಕೊಳ್ಳುವ ಮೂಲಕ ಹೊಂದಿನ ದಿನವೆಂದರೆ ನಮ್ಮ ಆರೋಗ್ಯದ ಕಡೆಗೆ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದರು. ಈ ಬಡಾವಣೆಯಲ್ಲಿ ಪಾರ್ಕ್ ಅನ್ನು ಚೆನ್ನಾಗಿ ಅಭಿವೃದ್ಧಿ ಮಾಡಬೇಕಾಗಿದೆ ನಗರ ಅಭಿವೃದ್ಧಿ ಪ್ರಾಧಿಕಾರವು ಈ ಪಾರ್ಕನ್ನು ನಿರ್ಮಾಣ ಮಾಡಿ ಕೊಟ್ಟಿದೆ ಇದರ ಹೊಣೆಗಾರಿಕೆ ಜವಾಬ್ದಾರಿ ನಿಮ್ಮ ಮೇಲಿದೆ ಬೇರೆ ದೀಪಗಳು ನೋಡಿಕೊಳ್ಳಬೇಕು ಇದು ನಿಮ್ಮ ಸಾರ್ವಜನಿಕ ಆಸ್ತಿ ಹಾಗಿದೆ.
ವೀರಶೈವ ಸಮಾಜದ ಮುಖಂಡರು ಕೆ ಡಿ ಪಿ ಸದಸ್ಯರಾದ ಕೆಸಿ ನಾಗರಾಜ್ ಮಾತನಾಡಿ ಯೋಗದಿಂದ ಉತ್ತಮವಾದ ಆರೋಗ್ಯವನ್ನು ಒಂದಬಹುದಾಗಿದೆ ಇದನ್ನು ನಾವು ದಿನನಿತ್ಯ ಮಾಡುವುದರಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು ಈ ಹಿಂದೆ ಋಷಿಮುನಿಗಳು ಹಲವಾರು ವರ್ಷಗಳ ತನಕ ಯೋಗಭ್ಯಾಸ ಮಾಡಿ ಅವರು ವರ್ಷಾನುಗಟ್ಟಲೆ ಬದುಕಿರುವ ಇತಿಹಾಸ ಇದೆ ಇದನ್ನು ಹಣದಿಂದ ಯಾರು ಸಂಪಾದನೆ ಮಾಡಲು ಆಗುವುದಿಲ್ಲ ಆದ್ದರಿಂದ ಇದನ್ನು ನೀವು ರೂಢಿ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮರ್ಚೆಂಟ್ಸ್ ಬ್ಯಾಂಕ್ ನ ನಿರ್ದೇಶಕರಾದ ರಘುರಾಮರೆಡ್ಡಿ ಬಡಾವಣೆಯ ಗುತ್ತಿಗೆದಾರರಾದ ಕುಮಾರ್ ಮಂಜುನಾಥ್ ಹೇಮಂತ್ ಕುಮಾರ್ ರಾಮಪ್ಪ ಕೇದಾರನಾಥ್ ರಾಮಸ್ವಾಮಿ ಚಂದ್ರಶೇಖರ್ ಮೆಕಾನಿಕ್ ರಂಗಸ್ವಾಮಿ ಅನಸೂಯ ರಂಗಸ್ವಾಮಿ ಶೋಭಾ ದೇವರಾಜ್ ಮತ್ತು ಬಡಾವಣೆಯ ಸದಸ್ಯರು ಮಕ್ಕಳು ಭಾಗವಹಿಸಿದ್ದರು.