ರಾಜ್ಯದಲ್ಲಿ ಅತಿ ಹೆಚ್ಚು ಅಪರಾಧಗಳು ತೊಂದರೆಗಳು ನಡೆಯುತ್ತಿವೆ ಇದರ ಪ್ರತಿಯಾಗಿ ರೈತರಿಗೆ ತುಂಬಾ ಕಷ್ಟಕರವಾಗಿದೆ ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ರೈತರ ಬೆಳೆದ ಬೆಳೆಗಳಲ್ಲಿ ತಮ್ಮ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥನೆಯ ಕಾರ್ಯಕ್ರಮವನ್ನು ತರಳಬಾಳು ಜಗದ್ಗುರು ಬೃಹನ್ಮಠ ವಿರಕ್ತ ಇವರ ಸಂಯುಕ್ತಾಕ್ಷರದಲ್ಲಿ ಇಂದು ಮಾವಿನ ತೋಪಿನ ಗದ್ದೆಗೆ ಆಭರಣದಲ್ಲಿ ನಡೆಯಲಿದೆ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದು ಜನರ ಮನಸ್ಸಿನಲ್ಲಿ ಆಳವಾಗಿ ಕೂತಿರುವ ವಿಷಯವಾಗಿದ್ದು ರೈತರ ಕಷ್ಟವನ್ನು ನೋಡಲಾರದೆ ಶ್ರೀಗಳು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ರಾಜ್ಯದ ವಿವಿಧಡೆ ಸ್ವಲ್ಪಮಟ್ಟಿಗೆ ಮಳೆ ಯಾಗಿದ್ದು ಇದು ಪೂರ್ಣ ಪ್ರಮಾಣವಾಗಿ ಬಂದರೆ ರೈತರ ಬದುಕು ಹಾಸನಾಗುತ್ತದೆ ಇಲ್ಲವಾದರೆ ಅವರು ತುಂಬಾ ತೊಂದರೆಯನ್ನು ಅನುಭವಿಸುವುದಲ್ಲದೆ ಇತರ ಜಲಚರ ಪ್ರಾಣಿ ಪಕ್ಷಿಗಳಿಗೂ ನೋವು ಉಂಟಾಗುತ್ತದೆ, ಇವುಗಳು ಬದುಕಲು ಸಾಧ್ಯ ಇಲ್ಲದಂತಹ ಪರಿಸ್ಥಿತಿ ಎದುರಾಗುತ್ತದೆ, ಆದ್ದರಿಂದ ಶ್ರೀಗಳು ರೈತರು, ಪ್ರಾಣಿ ಪಕ್ಷಿಗಳು ಮನುಕುಲ ಸಂತತಿ ಉಳಿವಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶ್ರೀಗಳು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಂದಿರುವ ರೈತರಿಗೆ ಲಘು ಉಪಹಾರವನ್ನು ಏರ್ಪಡಿಸಿದರು. ಶ್ರೀಗಳು ರೈತರನ್ನು ಉದ್ದೇಶಿಸಿ ಮಾತನಾಡಿ ನಂತರ ಗದ್ದಕ್ಕೆ ಪೂಜೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ ಎಂದು ತಿಳಿಸಿದರು.