ಸಾಮಾನ್ಯ ಜನರಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಚಿತ್ರನಟರು ಕಾಣಿಸಿಕೊಂಡರೆ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಹಾಗೂ ಅವರನ್ನು ಮಾತನಾಡಿಸಲು ಮುಂದಾಗುತ್ತಾರೆ. ಕೆಲವು ಜನರಿಗೆ ಇವರ ಆಗಮಿಕೆ ತುಂಬಾ ಆಶ್ಚರ್ಯವನ್ನು ಉಂಟು ಮಾಡುವುದಲ್ಲದೆ ಇವರು ನಮ್ಮೂರಿನಲ್ಲಿ ಬಂದಿದ್ದಾರ ಎಂಬ ಮಹತ್ವ ಆಕಾಂಕ್ಷೆಯಿಂದ ಅವರನ್ನು ತಬ್ಬಿಕೊಳ್ಳಲು ಮಾಡತಾರೆ.
ಇದೇ ರೀತಿ ಇರುವಾಗಲೇ ತೆಲುಗಿನ ನಟ ನಾಗಾರ್ಜುನ ಅವರು ವಿಮಾನ ನಿಲ್ದಾಣದಿಂದ ಹೊರಬರುವ ಸಮಯದಲ್ಲಿ ಅಭಿಮಾನಿ ನಾಗಾರ್ಜುನ್ ಜೊತೆ ಸೆಲ್ಫಿಯನ್ನು ತೆಗೆದುಕೊಳ್ಳಲು ಮುಂದಾಗುತ್ತಾನೆ ಆತನಿಗೆ ನಾಗಾರ್ಜುನ್ ಬಾಡಿಗಾರ್ಡ್ ಅಭಿಮಾನಿಯನ್ನು ತಳ್ಳಿ ಅಮಾನವೀಯತೆ ಮೆರೆದಿದ್ದಾರೆ.
ಇವರಿಗೆ ಸ್ವಲ್ಪ ನಾಗರಿಕತೆಯನ್ನು ಇಲ್ಲದಂತೆ ವರ್ತಿಸಿದ್ದಾರೆ ನಾಗಾರ್ಜುನ ಅವರು ವಿಮಾನ ನಿಲ್ದಾಣದಿಂದ ವರ ಬರುತ್ತಿರುವಾಗ ವಿಡಿಯೋವನ್ನು ತೆಗೆದಿದ್ದಾರೆ ಈ ವಿಡಿಯೋದಲ್ಲಿ ಅಭಿಮಾನಿಯನ್ನು ತಳ್ಳಿರುವ ಚಿತ್ರ ಸೆರೆಯಾಗಿದ್ದು ಇದು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು ಅತಿ ಹೆಚ್ಚು ವೀಕ್ಷಣೆ ಪಡೆದಿದೆ.
ಇದಕ್ಕೆ ನಾಗಾರ್ಜುನ ಅವರು ಕ್ಷಮಾಪಣೆ ಕೋರಬೇಕೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋ ನೋಡಿದ ಬಳಿಕ ಸ್ವತಃ ನಾಗಾರ್ಜುನ ಅವರು ಕ್ಷಮೆ ಕೇಳಿದ್ದಾರೆ. ಈ ಘಟನೆ ನಡೆದಾಗ ನಾಗಾರ್ಜುನ ಜೊತೆ ಕಾಲಿವುಡ್ ನಟ ಧನುಷ್ ಕೂಡ ಇದ್ದರು.
ಸ್ಟಾರ್ ನಟರ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಾಗ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುವುದು ಸಹಜ. ಆದರೆ ಫೋಟೋ ನೀಡಲು ಸಮಯ ಇಲ್ಲದಿರುವಾಗ ಸೆಲೆಬ್ರಿಟಿಗಳು ವೇಗವಾಗಿ ಮುಂದೆ ಸಾಗುತ್ತಾರೆ. ಅಲ್ಲದೇ, ಅವರ ಜನರು ಹತ್ತಿರ ಬರದಂತೆ ಬಾಡಿಗಾರ್ಡ್ ನೋಡಿಕೊಳ್ಳುತ್ತಾರೆ. ನಾಗಾರ್ಜುನ ಅವರ ವಿಚಾರದಲ್ಲೂ ಹಾಗೆಯೇ ಆಗಿದೆ.
ವಿಡಿಯೋ ನೋಡಿ ನಾಗಾರ್ಜುನ ಅವರು ಪ್ರತಿಕ್ರಿಯಿಸಿದ್ದಾರೆ. ‘ಇದು ಈಗತಾನೇ ನನ್ನ ಗಮನಕ್ಕೆ ಬಂತು. ಈ ರೀತಿ ಆಗಬಾರದಿತ್ತು. ಆ ವ್ಯಕ್ತಿಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇನ್ಮುಂದೆ ಎಚ್ಚರಿಕೆ ವಹಿಸುತ್ತೇನೆ. ಈ ರೀತಿ ಇನ್ನೆಂದೂ ಆಗುವುದಿಲ್ಲ’ ಎಂದು ನಾಗಾರ್ಜುನ ಅವರು ಭರವಸೆ ನೀಡಿದ್ದಾರೆ. ಕೆಲವರು ನಾಗಾರ್ಜುನ ಪರವಾಗಿ ಕಮೆಂಟ್ ಮಾಡಿದ್ದಾರೆ. ‘ಇದು ಬಾಡಿಗಾರ್ಡ್ ಮಾಡಿದ ತಪ್ಪು. ಈ ಬಗ್ಗೆ ನಾಗಾರ್ಜುನ ಅವರಿಗೆ ತಿಳಿದಿರಲಿಲ್ಲ’ ಎಂದು ಅಭಿಮಾನಿಗಳು ನಟನ ಪರವಾಗಿ ಕಮೆಂಟ್ ಮಾಡಿದ್ದಾರೆ.