ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೊಲೆ ದರೋಡೆ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಅಪರಾಧಗಳು ನಡೆಯುತ್ತಲೇ ಬರುತ್ತವೆ. ಇದರ ವಿರುದ್ಧ ರಾಜ್ಯ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದೆ ಅಪರಾಧಗಳು ಹೆಚ್ಚಾಗಲಿವೆ ಇವುಗಳನ್ನು ಮಟ್ಟ ಹಾಕಲು ಮುಂದಾಗದೆ ಇರುವುದು ತುಂಬಾ ಸೂಚನೆಯ ವಿಷಯವಾಗಿದೆ.
ಸ್ನೇಹ ಹತ್ಯೆ, ರೇವಣ್ಣ ಕುಟುಂಬದ ಮೇಲೆ ಲೈಂಗಿಕ ದೌರ್ಜನ್ಯ ಕೇಸು, ದರ್ಶನ್ ಅಮಾಯಕರನ್ನು ಹತ್ಯೆ ಮಾಡಿರುವ ಕೇಸ್, ಹೇಗೆ ಹಲವಾರು ಅಪರಾಧಗಳು ರಾಜ್ಯದಲ್ಲಿ ಹೆಚ್ಚಾಗುತ್ತೇವೆ ಅದೇ ರೀತಿ ಉದ್ಯೋಗವನ್ನು ಅರಸಿ ಬೆಂಗಳೂರಿಗೆ ಬಂದು ಕೆಲಸ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಮಲ್ಲೇಶ್ವರದಲ್ಲಿ ಯುವಕನೊಬ್ಬನನ್ನು ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆ ಬಳಿಯ ಪಾರ್ಕ್ ಬಳಿ ಭಾನುವಾರ ಸಂಜೆ ಈ ಕೊಲೆ ನಡೆದಿದೆ.
ಗಾರೆ ಕೆಲಸ ಮಾಡುತ್ತಿದ್ದ ಪನ್ನೀರ್ ಸೆಲ್ವಂ ಮೃತ ದುರ್ದೈವಿಯಾಗಿದ್ದಾನೆ. ಪಾರ್ಕ್ ಬಳಿ ಮೂರು ಜನರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಈಸಂದರ್ಭ ಇಬ್ಬರು ಸೇರಿ ಪನ್ನೀರ್ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.
ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಕುಡಿದ ಮತ್ತಿನಲ್ಲಿ ಗಲಾಟೆಯಾದ ಕಾರಣ ಕೊಲೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ರಾಜ್ಯ ಸರ್ಕಾರವು ಈ ಅಪರಾಧಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೆ ಇದ್ದರೆ ರಾಜ್ಯದಲ್ಲಿ ನೆಮ್ಮದಿ ಇಲ್ಲದೆ ಅಶಾಂತಿಯ ವಾತಾವರಣ ಉಂಟಾಗುತ್ತೇವೆ. ಜನರಲ್ಲಿ ಬದುಕುವ ಆಸೆಯೂ ಸಹ ಇಲ್ಲದಂತೆ ಆಗಿದೆ ರಾಜ್ಯದ ಗೃಹ ಮಂತ್ರಿಗಳು ಈ ಹೆಚ್ಚುತ್ತಿರುವ ಅಪರಾಧಗಳನ್ನು ಕಡಿವಾಣ ಹಾಕುವಂತೆ ಆವಿಷ್ಕಾರ್ ನ್ಯೂಸ್ ಮನವಿ ಮಾಡಿಕೊಳ್ಳುತ್ತದೆ.