ಕಾರವಾರ : ಬಿಜೆಪಿಯ ಪ್ರಭಾವಿ ವ್ಯಕ್ತಿಯಾದ ಕಾರವಾರದ ಪ್ರತಿಷ್ಠಿತ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಮನೆಯಲ್ಲಿ ಇಂದು ಅಗ್ನಿ ದುರಂತ ಸಂಭವಿಸಿದೆ ಕೆಲವು ವಸ್ತುಗಳು ಅಗ್ನಿಗೆ ಆಹುತಿಯಾಗಿ ಯಾವುದೇ ತರಹದ ಸಾವು ನೋವುಗಳು ಉಂಟಾಗಿಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೆಎಚ್‌ಬಿ ಕಾಲೋನಿಯಲ್ಲಿರುವ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಮನೆಯಲ್ಲಿ ಆಕಸ್ಮಿತವಾಗಿ ಬೆಂಕಿಯ ಕಾಣಿಸಿಕೊಂಡು ತಕ್ಷಣ ಅಗ್ನಿಶಮಕ ಠಾಣೆಗೆ ದೂರು ನೀಡಿ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಣ್ಣಪುಟ್ಟ ವಸ್ತುಗಳು ಮಾತ್ರ ಬೆಂಕಿಗೆ ಆಹುತಿಯಾಗಿದ್ದು ಯಾವುದೇ ತರಹದ ಅಹಿತಕರ ಘಟನೆ ನಡೆಯದಂತೆ ನೋಡಿ ಕಂಡಿದ್ದಾರೆ. ಇವರ ಸಮಯಪ್ರಜ್ಞೆಯಿಂದ ಯಾವುದೇ ತರಹದ ಹೆಚ್ಚು ಅಗ್ನಿ ಸಂಬಂಧಿಸಿದ ಎಂದು ಸುದ್ದಿಗಾರರೊಂದಿಗೆ ಅನಂತ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.