ಕಲಬುರ್ಗಿ : ರಾಜ್ಯದಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯ ಹಿನ್ನೆಲೆಯಿಂದ ಪ್ರವಾಹಗಳು ಆಗಬಹುದು ಮತ್ತು ಜನ-ಜಾನುವಾರುಗಳ ಹಾನಿಗಳನ್ನು ತಪ್ಪಿಸಲು ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗದ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರವಾಹದಿಂದ ಹಾನಿ ಯಾಗುವ ನಂತರ ಪರಿಹಾರ ನೀಡುವುದು ನಮ್ಮ ಕರ್ತವ್ಯ ಆದರೆ ಅಷ್ಟಕ್ಕೆ ನಮ್ಮ ಕೆಲಸ ಸೀಮಿತವಲ್ಲ ಬದಲಾಗಿ ಪ್ರವಾಹಕ್ಕು ಮುನ್ನ ಜನರ ರಕ್ಷಣೆ ಮಾಡಿ ಯಾವುದೇ ಹಾನಿಯಾಗದಂತೆ ತಡೆಗಟ್ಟುವುದು ಸರಕಾರದ ಉದ್ದೇಶ ಇದನ್ನರಿತ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆ ಜನರಿಗೆ ಪೂರಕವಾಗಿ ಕೆಲಸ ಮಾಡಬೇಕೆ ಹೊರತು ಜನರ ಬದುಕಿಗೆ ವರೆಯಾಗಬಾರದು. ಹಲವಾರು ಕಂದಾಯ ಪ್ರಕರಣಗಳಲ್ಲಿ ಜನರ ಸಮಸ್ಯೆಗಳ ಸುಳಿಯಲೇ ಸಿಲುಕಿ ಒದ್ದಾಡುತ್ತಿದ್ದಾರೆ ಇವರನ್ನು ಸಮಸ್ಯೆಗಳಿಂದ ಹೊರತಾಗಿ ಬೇಕು ಕೆಲಸ ತಳ ಹಂತದ ಅಧಿಕಾರಿಗಳು ಮಾಡಬೇಕು ಎಂದುರು.
ರಾಜ್ಯದಲ್ಲಿ ನಾಲ್ಕು ಕೋಟಿ ಪಹಣಿಗಳಲ್ಲಿ ಈಗಾಗಲೇ 170 ಕೋಟಿ ಪಹಣಿಗೆ ಆಧಾರ್ ಸೀಡಿಂಗ್ ಆಗಿದೆ ಉಳಿದಿದ್ದನ್ನು ಅಭಿಯಾನದ ಮೂಲಕ ಜುಲೈ ಮಾಸಂತ್ಯಕ್ಕೆ ಪೂರ್ಣಗೊಳಿಸಬೇಕು ಇದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಲಿದೆ ಜೊತೆಗೆ ಪರಿಹಾರ ವರ್ಗಾವಣೆ ಪ್ರಕ್ರಿಯೆ ಸರಳವಾಗಲಿದೆ ಎಂದರು.
ರಾಜ್ಯದಲ್ಲಿ ಹೊಸದಾಗಿ 1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳು 750 ಸರ್ವೆ ಹುದ್ದೆಗಳ ಭರ್ತಿಗೆ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ 34 ಎಡಿಎಲ್ ಆರ್ ನೇಮಕಾತಿ ಸಹ ನಡೆಯಲಿದೆ. ಇದರಿಂದ ಸರ್ವೆಯರ್ ಇಲಾಖೆಗೆ ಬಲ ಬರಲಿದೆ ಇದನ್ನು ಬಳಸಿಕೊಂಡು ಪ್ರಸ್ತುತ ಇರುವ 22 ಮಲ್ಟಿ ಹೋಲ್ಡರ್ ಆರ್ ಟಿ ಸಿ ಗಳನ್ನು ಅವರಿಗೆ ಪ್ರತ್ಯೇಕವಾಗಿ ಪೋಡಿ ಮಾಡಿ ಆರ್ ಟಿ ಸಿ ಮಾಡಿಸಿ ಕೊಡಬೇಕಾಗಿದೆ ಇದಕ್ಕಾಗಿ ರೋಡು ಮ್ಯಾಪ್ ಸಿದ್ಧಗೊಳ್ಳುತ್ತಿದೆ ಎಂದರು.
ಮಳೆಗಾಲ ಹಿನ್ನಲೆಯಲ್ಲಿ ಕಲುಷಿತ ನೀರು ಪೂರೈಕೆ ಸಾಮಾನ್ಯವಾಗಿ ಇರುತ್ತದೆ ಆದ್ದರಿಂದ ಇದನ್ನು ಮೆಟ್ಟಿನಿಂತು ಪ್ರತಿ ಹಳ್ಳಿ ಪಟ್ಟಣದ ಸಾರ್ವಜನಿಕರಿಗೆ ಶುದ್ಧೀಕರಿಸಿದ ಕುಡಿಯುವ ನೀರನ್ನು ಪೂರೈಸುವುದು ನಮ್ಮ ಜವಾಬ್ದಾರಿ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಿದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಮಾಂತೇಶ್, ಕಂದಾಯ ಇಲಾಖೆ ಆಯುಕ್ತರು ಪಿ ಸುನಿಲ್ ಕುಮಾರ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.