ಕೊಡಗು : ಸೂರಜ್ ರೇವಣ್ಣ ವಿಚಾರದಲ್ಲಿ ಯಾರೇನು ಮಾಡೋದಕ್ಕೆ ಆಗುತ್ತದೆ. ಪ್ರಜ್ವಲ್ ರೇವಣ್ಣ ಪ್ರಕರಣದ ನಾವು ಹುಟ್ಟಿ ಹಾಕಿದ್ದೇವಾ ? ಎಂದು ದಿನೇಶ್ ಗುಂಡರಾವ್ ಪ್ರಶ್ನಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲ್ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸೂರಜ್ ರೇವಣ್ಣ ತಪ್ಪು ಮಾಡಿರುವುದೇ ಅಥವಾ ಇಲ್ಲವೋ ಎಂಬುದು ನಮಗೆ ತಿಳಿದಿಲ್ಲ.
ಸೆಕ್ಷನ್ 377 ಪ್ರಕಾರ ಸಲಿಂಗ ಕಾಮ ಈಗ ತಪ್ಪಲ್ಲ. ಆದರೆ ಒತ್ತಡ ಮಾಡಿ ಕಿರುಕುಳ ಕೊಟ್ಟು ಸಂಪರ್ಕ ಆಗಿದ್ದಾರೆ ಅದು ತಪ್ಪು. ಸೂರಜ್ ರೇವಣ್ಣ ತಪ್ಪು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ.ಈಗ ಅವರ ವಿರುದ್ಧ ದೂರು ಇರುವುದು ಕಿರುಕುಳ ಕೊಟ್ಟು ಸಂಪರ್ಕ ಮಾಡಿದ್ದಾರೆ. ಈಗ ದೂರು ಇರುವುದು ಕಿರುಕುಳ ಕೊಟ್ಟ ಸಲಿಂಗ ಲೈಂಗಿಕ ಸಂಪರ್ಕ ಹೊಂದಿದ್ದಾರೆಂದು.
ಅದು ಕಾನೂನು ಪ್ರಕಾರ ಎಲ್ಲರೂ ಒಂದೇ ಅಲ್ವಾ ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದಿದ್ದಾರೆ. ಅವರದೇ ಕುಟುಂಬದ ಲೈಂಗಿಕ ಹಗರಣದ ವಿಚಾರಗಳು ಬ್ಯಾಕ್ ಟು ಬ್ಯಾಕ್ ಬರುತ್ತಿವೆ ಅಲ್ಲ ಎಂದು ಪ್ರಶ್ನೆಗೆ ಬ್ಯಾಕ್ ಟು ಬ್ಯಾಕ್ ಅಂದರೆ ನಾವು ಸೃಷ್ಟಿ ಮಾಡಿ ಇರುವುದಲ್ಲ ಅದು ಫ್ರಾಡ್ ಟು ಫ್ರಾಡ್ ನಮಗೇನು ಗೊತ್ತು ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯ ಮಾಡಿದರು. ದೇವೇಗೌಡರ ಕುಟುಂಬವನ್ನು ನಾಶ ಮಾಡಲು ಹೀಗೆಲ್ಲಾ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ ಎಂಬ ಪ್ರಶ್ನೆ ಗೆ ಪ್ರತಿಕ್ರಿಯಿಸಿದ ಅವರು ಗೆಲ್ಬೇಕು ಎಂದು ಅವರು ಕೆಲಸ ಮಾಡುತ್ತಾರೆ, ನಾವು ಗೆಲ್ಬೇಕು ಎಂದು ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ ಆದರೆ ಇವನ್ನೆಲ್ಲ ಅವರು ವೈಯಕ್ತಿಕವಾಗಿ ಬಳಸಿಕೊಂಡರೆ ನಾವೇನು ಮಾಡಲಾಗಲ್ಲ ರಾಜಕೀಯದಲ್ಲಿ ನಮ್ಮ ಎದುರಾಳಿಯನ್ನು ನಾವು ಎದ್ರಿಸಾ ಬೇಕು, ಯಾರು ಕೂಡ ನಮ್ಮನ್ನು ಎದಿರುವ ಆಳಿ ಗೆದ್ದುಕೊಂಡು ಹೋಗಲಿ ಎಂದು ಬಿಡಲ್ಲ ಅದರಲ್ಲಿ ವೈಯಕ್ತಿಕವಾಗಿ ತೆಗೆದುಕೊಳ್ಳುವಂತದ್ದು ಏನೂ ಇಲ್ಲ. ಇದನ್ನು ವೈಯುಕ್ತಿಕ ಪ್ರತಿಷ್ಠೆ ಮಾಡಿಕೊಂಡು ಜನರ ಅನುಕಂಪ ಪಡೆದುಕೊಳ್ಳುವ ಪ್ರಯತ್ನ ಅಷ್ಟೇ ಎಂದು ಲೇವಾಡಿ ಮಾಡಿದರು.
ಗ್ಯಾರಂಟಿ ಯೋಜನೆಗಳು ಜಾರಿಯಾಗಿಲ್ಲ ಎಂದು ಮಾಡುವ ಆರೋಪ ಸುಳ್ಳು ಚುನಾವಣಾ ನೀತಿ ಸಮಿತಿಯಿಂದ ಸರ್ಕಾರ ಈಗಷ್ಟೇ ಹೊರ ಬಂದಿದೆ ಆದರೆ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಇನ್ನು ಬರೀ ದ್ವೇಷ ಭಾಷಣ ಮಾಡುವ ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಶಿ ಅವರು ರಾಜ್ಯದಿಂದ ಮುಖ್ಯಮಂತ್ರಿಗಳಾಗಿದ್ದಾರೆ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಅವರು ಸರಿಪಡಿಸಲಿ ಅದರಲ್ಲಿ ಇವರ ವಕಲತ್ತುವಹಿಸಿ ಎಂದು ದಿನೇಶ್ ಗುಂಡರಾವ್ ತಿಳಿಸಿದರು.