ಶಿವಮೊಗ್ಗ : ಶೃಂಗೇರಿ ಯಲ್ಲಿ ಹುಟ್ಟಿ ಶಿವಮೊಗ್ಗ ಜಿಲ್ಲೆಯಲ್ಲಿ ಹಾದು ಹೋಗುವ ತುಂಗಾ ನದಿಯ ದಶಕಗಳಿಂದ ಮಲಿನಗೊಳ್ಳುತ್ತಿದೆ, ಜೂ 19 ಕ್ಕೆ ಶಿವಮೊಗ್ಗದ ತುಂಗಾ ನದಿಯ ತೀರಾಕ್ಕೆ ಚಿತ್ರನಟ ಅನಿರುದ್ಧ ಭೇಟಿ ನೀಡಿದ್ದು ಈ ವೇಳೆ ತುಂಗಾ ನದಿ ತುಂಬಾ ಕಲುಷಿತಗೊಳ್ಳುತ್ತಿರುವುದು ನೋಡಿ ನಮಗೆ ಬೇಸರ ತಂದಿದೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತುಂಗಾ ನದಿಯ ನೀರನ್ನು ಸ್ವಚ್ಛತೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು. ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವ ಅನಿರುದ್ಧ ತುಂಗಭದ್ರ ನದಿಗೆ ಸ್ವಚ್ಛತಾ ಕಾರ್ಯವನ್ನು ಮಾಡಬೇಕೆಂದು ಮನವಿ ಸಲ್ಲಿಸಿದರು.
ಇದನ್ನು ಸಿಎಂ ಆಫ್ ಕರ್ನಾಟಕ ಟ್ವೀಟ್ ಮಾಡಿದ್ದು ನಟ ಅನಿರುದ್ಧ ಅವರು ಇಂದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ನೀರಾವರಿ ನಿಗಮದ ವ್ಯವಸ್ಥೆಪಕ ಕಚೇರಿಗೆ ಕರೆ ಮಾಡಿ ತುಂಗಭದ್ರ ನದಿ ಸ್ವಚ್ಛತೆಗೆ ಗಮನಹರಿಸುವಂತೆ ಸೂಚನೆ ಬರೆಯಲಾಗಿದೆ ಎಂದರು.
ಮಾಲಿನ್ಯ ನೀರು ನದಿಗೆ ಬಿಡದಂತೆ ಜಿಲ್ಲಾಡಳಿತ ಗಮನಹರಿಸಲು ನಟ ಹನಿರೋಧ ಒತ್ತಾಯಿಸಿದರು ಇದೇ ನೀರು ಹರಿಹರ ಹೊಸಪೇಟೆ ಮಂತ್ರಾಲಯಕ್ಕೆ ಹರಿದು ಹೋಗುತ್ತದೆ. ತುಂಗಭದ್ರಾ ನದಿಯ ನೀರು ಪವಿತ್ರವಾಗಿದೆ ಎಂದು ಎಲ್ಲರೂ ಪೂಜಿಸುತ್ತಾರೆ. ಆದರೆ ಇಂತಹ ಮಾಲಿನ್ಯ ನೀರು ಮುಂದಿನ ಜಿಲ್ಲೆಗಳಿಗೆ ಹೋಗುತಿರುವುದು ಸರಿಯಲ್ಲ.
ಶಿವಮೊಗ್ಗದ ತುಂಗಾ ನದಿಗೆ ನೇರವಾಗಿ ಮಲೆನಾಥ್ವಾದ ನೀರು ಸೇರ್ಪಡೆಯಾಗುತ್ತದೆ ಶಿವಮೊಗ್ಗದ ನಗರದ ತ್ಯಾಜ್ಯ ಮತ್ತು ಮಾಲಿನ್ಯ ನೀರು ನೇರವಾಗಿ ಸೇರುತಿದೆ ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಗಂಗಡಿ ಕಲ್ಲು ಗ್ರಾಮದಲ್ಲಿ ತುಂಗಾ ನದಿಗೆ ಉಗಮ ಸ್ಥಾನವಾಗಿದೆ.
ಶೃಂಗೇರಿ ಮತ್ತು ತೀರ್ಥಳ್ಳಿ ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮದ ಮಲ್ಲಿನ ನೀರನ್ನು ನೇರವಾಗಿ ನದಿಗೆ ಸೇರುತಿದೆ ಶಿವಮೊಗ್ಗ ನಗರದಲ್ಲಿ ಹರಿದು ಹೋಗುತ್ತಿರುವ ತುಂಗೆ ನದಿಗೆ ದಶಕಗಳಿಂದ ಸೇರುತ್ತಿರುವ ಮಲೆನ ನೀರು ನಗರದಲ್ಲೇ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ರೀತಿ ಆಗುತ್ತಿದೆ ಆದ್ದರಿಂದ ಮಹಾನಗರ ಪಾಲಿಕೆ ಮತ್ತು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇದರ ಬಗ್ಗೆ ಗಮನಹರಿಸಬೇಕೆಂದು ತಿಳಿಸಿದರು.