Breaking
Wed. Dec 25th, 2024

ಆಹಾರದಲ್ಲಿ ಕಳಪೆ ಸಾಮಗ್ರಿ ಸರಬರಾಜು ಮಾಡಿರುವವರು ಕಪ್ಪು ಪಟ್ಟಿಗೆ ಸೇರಿಸುವಂತೆ ಸಚಿವರು ಕಟ್ಟುನಿಟಿನ ಕ್ರಮಕ್ಕೆ  ಸೂಚನೆ ಡಿ ಸುಧಾಕರ್….!

ಚಿತ್ರದುರ್ಗ : ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ 23 – 24ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಧಾಕರ್. ಜಿಲ್ಲೆಯಲ್ಲಿ ಬಾಲಕಿಯರು ಅತಿ ಹೆಚ್ಚು ಶಾಲೆಯಿಂದ ಹೊರಗೆ ಉಳಿಯುವುದು ಕಂಡುಬಂದಿದೆ ಇದರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಅವರನ್ನು ಮತ್ತೆ ಶಾಲೆಗೆ ಬರುವಂತೆ ಮಾಡಬೇಕು.

ಬಾಲಕಿಯರನ್ನು ಮುಖ್ಯ ವಾಹನಿಗೆ ತರಲು ಹಾಗೂ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಿ ಎಂದು ಯೋಚನೆ ಮತ್ತು ಸಾಂಕೇತಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.

ಚಿತ್ರದುರ್ಗ ಜಿಲ್ಲೆಗೆ ಆರು ತಾಲೂಕುಗಳಿದ್ದು ಈ ತಾಲೂಕಿನಲ್ಲಿ ಅಂಗನವಾಡಿಗಳನ್ನು ಖುದ್ದಾಗಿ ಭೇಟಿ ನೀಡಬೇಕು ಶಿಕ್ಷಣ ಇಲಾಖೆಯಿಂದ ಮತ್ತು ಶಾಲೆಯಿಂದ ಹೊರಗುಳಿದ ಬಾಲಕಿಯರನ್ನು ಮಾಹಿತಿ ಪಡೆದು ಅವರನ್ನು ಶಾಲೆಗೆ ಬರುವಂತೆ ಮನ ವಲಿಸಬೇಕು ಇದು ಶಿಕ್ಷಣ ಇಲಾಖೆಯ ಜವಾಬ್ದಾರಿ ಎಂದರು.

ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಆಹಾರ ಸರಬರಾಜು ಮತ್ತು ಗುಣಮಟ್ಟದ ಪದಾರ್ಥಗಳನ್ನು ಕೊಡುತ್ತಿಲ್ಲ ಎಂದು ಸಾಕಷ್ಟು ದೂರುಗಳು ಕೇಳು ಬರುತ್ತವೆ. ಆಹಾರದಲ್ಲಿ ಕಳಪೆ ಸಾಮಗ್ರಿ ಸರಬರಾಜು ಮಾಡಿರುವವರು ಕಪ್ಪು ಪಟ್ಟಿಗೆ ಸೇರಿಸುವಂತೆ ಸಚಿವರು ಕಟ್ಟುನಿಟಿನ ಕ್ರಮಕ್ಕೆ  ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕೆ ಭಾರತಿ ಆರ್ ಬಣಕರ್ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 193 ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿದ್ದು ಅದರಲ್ಲಿ 102 ಪ್ರಕರಣಗಳನ್ನು ತಡೆಯಡೆಯಲಾಗಿದೆ 91 ಪ್ರಕರಣಗಳಿಗೆ ಸಂಬಂಧಿಸಿದಂತೆ 11ರಿಂದ 18 ವರ್ಷದ 154 ಶಾಲೆಗಳಿಂದ ಹೊರಗೆಡೆದ ಹೆಣ್ಣು ಮಕ್ಕಳನ್ನು ಗುರುತಿಸಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮಾನುಲ್ಲಾ ಆದಿತ್ಯ ಬಿಸ್ವಾಸ್ ಅವರು ಕಾನೂನು ಅನ್ವಯ ಬಾಲ್ಯ ವಿವಾಹಕ್ಕೆ ಕಾರಣಕರ್ತರಾಗಿರುವ ಪುರೋಹಿತರು ಕಲ್ಯಾಣ ಮಂಟಪದವರು ಕ್ಯಾಟರಿಂಗ್ ಶಾಮಿಯಾನ ಸೇರಿದಂತೆ ಪಾಲ್ಗೊಂಡ ಎಲ್ಲರ ಮೇಲು ಮುಖದಮೆ ದಾಖಲಿಸಲು ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಬಿ.ಜೆ ಗೋವಿಂದಪ್ಪ, ಟಿ ರಘುಮೂರ್ತಿ, ಕೆ.ಸಿ ವೀರೇಂದ್ರ ಪಪ್ಪಿ, ಎಂ ಚಂದ್ರಪ್ಪ, ಎನ್ ವೈ ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್, ಡಿ ಟಿ ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮಾನುಲ್ಲಾ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಕೆಡಿಪಿ ನಾಮ ನಿರ್ದೇಶಕ ಸದಸ್ಯರಾದ ಕಲಿಲ್ ಉಲ್ಲಾ ,ರಂಗಸ್ವಾಮಿ, ದೀಪಿಕಾ, ಸತೀಶ್, ತಿಮ್ಮಯ್ಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *