ಚಿತ್ರದುರ್ಗ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ 2023 -24 ನೇ ಸಾಲಿನ ಮಾರ್ಚ್ ಅಂತ್ಯದೊಳಗಿನ ಕೆ ಡಿ ಪಿ ತ್ರೈಮಾಸಿಕ ಪರಿಷತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಸುಧಾಕರ್ ಅವರು ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೆ ನಿಯಮಾನುಸಾರ ರಸ್ತೆ ಅಗಲವಿರಬೇಕು. ಕಿರಿದಾಗಿರುವ ಕಡೆಗಳಲ್ಲಿ ರಸ್ತೆ ಅಗಲೀಕರಣಕ್ಕೆ ಕ್ರಮವಹಿಸಬೇಕು.
ಒಂದು ಮಾರ್ಗದಲ್ಲಿ ಯಾರಾದರೂ ನ್ಯಾಯಾಲಯದಿಂದ ತಡೆಯಾಗ್ನೇತಂದರೆ ಅದನ್ನು ತಕ್ಷಣವೇ ವಹಿಸಿಕೊಡಲು ಈ ಕುರಿತು ಜಿಲ್ಲಾಧಿಕಾರಿಗಳು ಅಧಿಕಾರಿಗಳ ಜೊತೆ ಮಾತನಾಡಿ ಸಭೆ ನಡೆಸಿ ಜಿಲ್ಲಾ ಕೇಂದ್ರದ ಮುಖ್ಯ ರಸ್ತೆಯ ಅಗಲೀಕರಣಕ್ಕೆ ಈ ಕುರಿತು ತ್ವರಿತವಾಗಿ ಸೂಚನೆ ನೀಡಿ.
ಶಾಸಕ ಎಂ ಚಂದ್ರಪ್ಪ ಮಾತನಾಡಿ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಬರುವವರು ಅಸಯ್ಯ ಪಡುತ್ತಿದ್ದಾರೆ. ಕಳೆದ 29 ವರ್ಷಗಳಿಂದ ನ್ಯಾಯಾಲಯದ ತಡೆಯಾಜ್ಞೆಯಾಗಲು ಸಾಧ್ಯವಿಲ್ಲ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದ ಶಾಸಕರು ಹೊಳಲ್ಕೆರೆಯಲ್ಲಿ ಯಾರ ಮೊಲಾಜಿಗೂ ರಸ್ತೆ ಅಗಲೀಕರಣ ಮಾಡಲಾಗಿದೆ ಎಂದು ಅವರು ಹೇಳಿದರು.
ಶಾಸಕ ವೀರೇಂದ್ರ ಪಪ್ಪಿ ಮಾತನಾಡಿ ಚಿತ್ರದುರ್ಗ ನಗರದ ಒಂದು ಸುತ್ತು ವರೆಗೆ ಡಿವೈಡರ್ ತೆರವು ಮಾಡಲಾಗಿದೆ sbI ಬ್ಯಾಂಕ್ ನಿಂದ ಗಾಂಧಿ ಸರ್ಕಲ್ ವರೆಗೆ ಮಾರ್ಗದಲ್ಲಿ ಸೈಕಲ್ ವಾಕಿಗೆ ಪ್ರಸ್ತಾವನೆ ಸಿಗಲಿದೆ. ನಗರದ ಚಳ್ಳಕೆರೆ ಗೇಟ್‌ನಲ್ಲಿ ವಾಹನಗಳು, ಸಂಚಾರ ಮಾಡುತ್ತಿವೆ. ಇಂತಹ ಅಪಘಾತಗಳು ಸಂಭವಿಸುವುದರಿಂದ ಚಳ್ಳಕೆರೆ ಗೇಟ್‌ನಲ್ಲಿ ವೃತ್ತ ನಿರ್ಮಿಸಲಾಗಿದೆ ಎಂದು ಧ್ವನಿಗೂಡಿಸಿದ ಶಾಸಕ ಟಿ ರಘುಮೂರ್ತಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆ ಅಗಲೀಕರಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಸಲಹೆ ಸೂಚನೆ.
ಸಭೆಯಲ್ಲಿ ಶಾಸಕರಾದ ಬಿಜಿ ಗೋವಿಂದಪ್ಪ, ಟಿ ರಘುಮೂರ್ತಿ, ಕೆಸಿ ವೀರೇಂದ್ರ ಪಪ್ಪಿ, ಎಂ ಚಂದ್ರಪ್ಪ, ವೈಎನ್ ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್, ಡಿಟಿ ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮಾನುಲ್ಲಾ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ಪಂಚಾಯತ್ ಸಿಐಒ ಎಸ್ ಜೆ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಕೆಡಿಪಿ ನಾಮ ನಿರ್ದೇಶಕ ಸದಸ್ಯ ಕಲೀಲ್ ಉಲ್ಲಾ, ರಂಗಸ್ವಾಮಿ, ದೀಪಿಕಾ, ಸತೀಶ್, ತಿಮ್ಮಯ್ಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.