Breaking
Tue. Dec 24th, 2024

ಜಿಲ್ಲೆಯ ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣು ಇಟ್ಟಿರುವ ಆರೋಗ್ಯ ಇಲಾಖೆ…!

ಬೆಳಗಾವಿ : ಜಿಲ್ಲೆಯ ಸ್ಥಳೀಯ ವೈದ್ಯರು ಹಾವಳಿ ಹೆಚ್ಚಾಗಿದ್ದು ಇದನ್ನು ತಡೆಗಟ್ಟುವ ಔಷಧ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದು, ಸಾರ್ವಜನಿಕರು ದೂರು ನೀಡಿದ ಬಡ್ಕಲಗಲ್ಲಿಯ ಕ್ಲಿನಿಕಲ್ ಮೇಲೆ ಮಂಗಳವಾರ ದಾಳಿ ನಡೆಸಿದ ಘಟನೆ ನಡೆದಿದೆ.

ಕಿತ್ತೂರಿನ ನಕಲಿ ವೈದ್ಯ ಲಾಡಖಾನ್ ಪ್ರಕರಣ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಎಲ್ಲೆಲ್ಲಿ ಸಾರ್ವಜನಿಕರು ದೂರು ನೀಡುತ್ತಿದ್ದಾರೋ ಆಯಾ ಕ್ಲಿನಿಕ್ ಮೇಲೆ ದಾಳಿ ನಡೆಸಿ ನಕಲಿ ವೈದ್ಯರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣು ಇಟ್ಟಿರುವ ಆರೋಗ್ಯ ಇಲಾಖೆ ನಗರದ ಶಿವ ಕ್ಲಿನಿಕ್ ಮತ್ತು ಗುರು ಕೃಪಾ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಆಸ್ಪತ್ರೆಯ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಶಿವ ಕ್ಲಿನಿಕ್ ಗೆ ನೋಟಿಸ್ ನೀಡಿದೆ ಎಂದು ಆರೋಗ್ಯ ಸಿಬ್ಬಂದಿಗಳು.

ಬೆಳಗಾವಿ ಡಿಎಚ್ ಒ ಮಹೇಶ ಕೋಣಿ, ಟಿಎಚ್ ಒ ಸಂಜಯ್ ಡುಮ್ಮಗೋಳ, ಬೆಳಗಾವಿ ತಹಶಿಲ್ದಾರರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಡಿಓ ಮಹೇಶ ಕೋಣಿ, ಬಡಕಲಗಲ್ಲಿ ಶಿವಾ ಕ್ಲಿನಿಕ್ ಎಂದು ನಾಮಫಲಕ ಹಾಕಿ ಒಳಗಡೆ ಬೇರೆ ಕೊಡುತ್ತಿದ್ದಾರೆ.

ಇವರು ಪಡೆದಿರುವ ದಾಖಲಾತಿ ನಕಲಿ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.ಶಿವಾ ಕ್ಲಿ ಎಂದು ನಾಮಫಲಕ ಹಾಕಿ ಬೇಕಾಬಿಟ್ಟಿ ನೀಡಿದ್ದಾರೆ. ವೈದ್ಯರು ಎಲ್ಲಿದ್ದಾರೆ ಎಂದು ಕೇಳಿದರೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಇಲ್ಲಿನ ಸಿಬ್ಬಂದಿಗಳು. ಶಿವಾ ಕ್ಲಿನಿಕ್ ಬಗ್ಗೆ ಜನರ ಜಾಗೃತಿ ಇರಬೇಕು. ಕಳೆದ ಮೂರು ವರ್ಷಗಳ ಹಿಂದೆ ಈ ಕ್ಲಿನಿಕ್ ಮೇಲೆ ದೂರುಗಳು ಬಂದಿದ್ದವು. ಆಗ ಇದನ್ನು ಸೀಜ್ ಮಾಡಲಾಗಿದೆ. ಈಗ ಮತ್ತೇ ಜಿಲ್ಲಾಧಿಕಾರಿಗಳಿಗೆ ದೂರು ಬಂದೊಡನೆ ನಾವು ಸೀಜ್ ಮಾಡಿದ್ದೇವೆ ಎಂದು ಹೇಳಿದರು.

Related Post

Leave a Reply

Your email address will not be published. Required fields are marked *