ಮಂಡ್ಯ : ಸಾರಿಗೆ ಬಸ್ ಡಿಕ್ಕಿಯಾಗಿ ಕೆಪಿಟಿಸಿಎಲ್ ಇಂಜಿನಿಯರ್ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಕುಣಿಗಲ್ ಗೇಟ್ ಬಳಿ ನಡೆದಿದೆ. ಮೃತರನ್ನು ಮಳವಳ್ಳಿ ತಾಲೂಕಿನ ಪಂಚೇನಹಳ್ಳಿ ಗ್ರಾಮದ ಟಿ ರವಿ (40) ಎಂದು ಗುರುತಿಸಲಾಗಿದೆ.
ಶಿವನಸಮುದ್ರ ಬಳಿಯ ಕೆಪಿಟಿಸಿಎಲ್ ವಿಭಾಗದ ಕಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಬೈಕಿನಲ್ಲಿ ಮಳವಳ್ಳಿ ಪಟ್ಟಣಕ್ಕೆ ಹೋಗಿ ಮಂಚೇನಹಳ್ಳಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಕೆಪಿಟಿಸಿಎಲ್ ಇಂಜಿನಿಯರ್ ಪಿ ರವಿ ಅವರು ವಾಪಸ್ ಆಗುತ್ತಿದ್ದ ಸಂದರ್ಭದಲ್ಲೇ ಮಳೆ ಬಂದ ಕಾರಣ ರವಿ ಅವರು ರಾಷ್ಟ್ರೀಯ ಹೆದ್ದಾರಿ 209ರ ಕುಣಿಗಲ್ ಗೇಟ್ ಬಳಿ ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಿ ಮರ ಒಂದರ ಕೆಳಗೆ ಹಣ್ಣು ಕರೆದಿಗೆ ಹೇಳುತ್ತಿದ್ದಾಗ.
ಈ ವೇಳೆಯಲ್ಲಿ ತಿಳುವಳಿಕೆಯಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ನಿಂತಿದ್ದ ಪಿ ರವಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ ತೀರ್ವ ವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನಪ್ಪಿದ್ದರು.
ನಟನಾ ಸ್ಥಳಕ್ಕೆ ಗ್ರಾಮಂತರ ಪಿಎಸ್ಐ ಶ್ರವಣ್ದಾಸರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಎಲ್ಲಿ ಪ್ರಕರಣ ದಾಖಲಾಗಿದೆ.